ಗುರುವಾರ , ನವೆಂಬರ್ 14, 2019
18 °C

ಕಲ್ಯಾಣ ಮಂಟಪದಲ್ಲಿ ‘ವಂದೇ ಮಾತರಂ’

Published:
Updated:

ಹಾಸನ: ನೂತನ ದಂಪತಿ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೇಶಭಕ್ತಿ ಮೆರೆದರೆ, ನೆರೆದಿದ್ದ ಬಂಧು ಬಾಂಧವರು ವಂದೇ ಮಾತರಂ ಗೀತೆಗೆ ಧನಿಗೂಡಿಸಿ ವಿವಾಹ ಸಂಭ್ರಮಕ್ಕೆ ಕಳೆ ತಂದರು.

ನಗರದ ಗೋಮತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನೆರವೇರಿದ ವಿವಾಹ ಸಮಾರಂಭ ರಾಷ್ಟ್ರಭಕ್ತಿಯ ಪ್ರತೀಕವಾಗಿತ್ತು.
ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುತ್ತಿರುವ ಬೇಲೂರಿನ ರಾಜೀವ್, ಆಲೂರು ತಾಲ್ಲೂಕು ಕುದುರುವಳ್ಳಿ ಗ್ರಾಮದ ಈಶ್ವರಿ ಅವರನ್ನು ವಿವಾಹವಾದರು. ರಾಜೀವ್ ಪ್ರಸ್ತುತ ಅಹಮದಾಬಾದ್‌ನಲ್ಲಿ ಸೈನಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮದುವೆ ಸಮಾರಂಭದಲ್ಲಿ ಭಾರತ ಮಾತೆಯನ್ನು ಸ್ಮರಿಸಲು ನಿರ್ಧರಿಸಿದ್ದರು.

ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ದಂಪತಿ ನಂತರ ಕುಟುಂಬದ ಹಿರಿಯರ ಆಶೀರ್ವಾದ ಪಡೆದರು. ವಂದೇ ಮಾತರಂ ಗೀತೆಗೆ ಗೌರವ ಸೂಚಿಸಿ ನಂತರ ಆರತಕ್ಷತೆ ಕಾರ್ಯಕ್ರಮ ನಡೆಯಿತು.

ಮದುವೆಗೆ ಬಂದಿದ್ದ ನೂರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)