ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಸರಣಿ ಸಾವುಗಳು ಮುಂದುವರಿದಿರುವ ಬೆನ್ನಲ್ಲೇ ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಗುತ್ತಿದೆ. ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಜನರು ವಾಯುವಿಹಾರ, ವ್ಯಾಯಾಮದತ್ತ ಮುಖ ಮಾಡಿದ್ದು, ಜಿಲ್ಲಾ ಕ್ರೀಡಾಂಗಣ, ಉದ್ಯಾನಗಳು ಜನರಿಂದ ತುಂಬಿ ತುಳುಕುತ್ತಿವೆ.

ಒಂದುವರೆ ತಿಂಗಳಲ್ಲಿ ಜಿಲ್ಲೆಯಲ್ಲಿ 30 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದು, ಇದರಿಂದ ಆತಂಕಗೊಂಡ ಜನರು ಬೆಳಿಗ್ಗೆ ಜಿಮ್, ಉದ್ಯಾನ ಹಾಗೂ ಕ್ರೀಡಾಂಗಣದತ್ತ ತಂಡೋಪತಂಡವಾಗಿ ಬರುತ್ತಿದ್ದಾರೆ. ವ್ಯಾಯಾಮ ಮಾಡುತ್ತಿದ್ದಾರೆ. ನಸುಕಿನ ಜಾವದಲ್ಲೇ ಚಳಿಯನ್ನೂ ಲೆಕ್ಕಿಸದೇ ಯುವಕರು, ವೃದ್ಧರು ಸೇರಿದಂತೆ ಹಲವರು ಉದ್ಯಾನಗಳಿಗೆ ಭೇಟಿ ನೀಡುತ್ತಿದ್ದು, ಯುವಜನತೆ ಜಿಮ್ಗಳಿಗೆ ತೆರಳುತ್ತಿದ್ದಾರೆ.

ಆಹಾರ ಸೇವನೆಯಲ್ಲಿ ಬದಲಾವಣೆ: ಜಂಕ್ ಫುಡ್, ಹೋಟೆಲ್ ತಿಂಡಿಗಳನ್ನು ಸೇವಿಸುತ್ತಿದ್ದ ಜನರು, ಆರೋಗ್ಯದೃಷ್ಟಿಯಿಂದ ಪೌಷ್ಟಿಕ ಆಹಾರದತ್ತ ಮುಖ ಮಾಡಿದ್ದಾರೆ. ಹಣ್ಣು ಹಂಪಲು, ಸೊಪ್ಪು, ತರಕಾರಿ, ಮೊಳಕೆ ಕಾಳುಗಳನ್ನು ಸೇವಿಸಲು ಆಸಕ್ತಿ ತೋರುತ್ತಿದ್ದಾರೆ.

ತರಕಾರಿ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಹೆಚ್ಚು ಜನರು ಸೊಪ್ಪು ಮತ್ತು ತರಕಾರಿಗಳನ್ನು ಖರೀದಿಸುತ್ತಿದ್ದಾರೆ. ಇದರಿಂದಾಗಿ ಸಂಜೆಯ ವೇಳೆ ಗಿಜಿಗಿಡುತ್ತಿದ್ದ ನಗರದ ಫುಡ್ಪಾರ್ಕ್ಗಳಲ್ಲಿ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಹೆಚ್ಚಿದ ತಪಾಸಣೆ: ನಗರದ ಆಸ್ಪತ್ರೆಗಳಿಗೆ ದೌಡಾಯಿಸುತ್ತಿರುವ ಜನರು ಹೃದಯ ಸಂಬಂಧಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಹೃದಯಕ್ಕೆ ಸಂಬಂಧಿಸಿದಂತೆ ಇಸಿಜಿ, ಎಕೊ, ಟಿಎಂಟಿಯಂತಹ ಪರೀಕ್ಷೆಗಳಿಗೆ ಜನರು ಒಳಗಾಗುತ್ತಿದ್ದಾರೆ.

ಹೃದಯ ಸಮಸ್ಯೆ ಇರುವವರು ಮುಂಜಾಗ್ರತಾ ಕ್ರಮವಾಗಿ ದೇಹದ ಎಲ್ಲ ಬಗೆಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಆಸ್ಪತ್ರೆಗಳತ್ತ ಮುಗಿ ಬೀಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ಒಂದೂವರೆ ತಿಂಗಳಿನಲ್ಲಿ ಹೃದಯಾಘಾತದಿಂದ 30 ಜನರ ಸಾವು ಪರಿಶೀಲನೆ ಆರಂಭಿಸಿರುವ ಆರೋಗ್ಯ ಇಲಾಖೆ ತಂಡ: ಮೃತರ ಮನೆಗಳಿಗೆ ಭೇಟಿ ಹೃದಯಾಘಾತದ ಬಗ್ಗೆ ಆತಂಕ ಪಡಬೇಡಿ: ಆರೋಗ್ಯ ಅಧಿಕಾರಿಗಳ ಮನವಿ

ಇದುವರೆಗೆ ಬೆಳಗಿನ ಜಾವ ಕೆಲವರೇ ವಾಯುವಿಹಾರಕ್ಕೆ ಬರುತ್ತಿದ್ದರು. ಈಗ ಯುವಜನರೂ ಹೆಚ್ಚಾಗಿ ಪಾರ್ಕ್ಗಳಿಗೆ ಬರುತ್ತಿದ್ದು ವ್ಯಾಯಾಮ ಮಾಡುತ್ತಿದ್ದಾರೆ
ಶಶಿಕಿರಣ ಹಾಸನದ ವಾಯುವಿಹಾರಿ

ಹೃದಯಾಘಾತದ ಭಯಕ್ಕೆ ಉದ್ಯಾನಗಳಿಗೆ ಬರುವುದು ಸರಿಯಲ್ಲ. ಆರೋಗ್ಯ ಕಾಪಾಡಿಕೊಳ್ಳಲು ನಿತ್ಯವೂ ವಾಕಿಂಗ್ ವ್ಯಾಯಾಮ ಮಾಡುವುದು ಒಳಿತು
ನಳಿನಿ ಮಹಾರಾಜ ಪಾರ್ಕ್ನ ವಾಯುವಿಹಾರಿ

ನನ್ನ ಪತಿಗೆ ಯಾವುದೇ ಸಮಸ್ಯೆ ಇರಲಿಲ್ಲ ‘ನನ್ನ ಪತಿ ಆರೋಗ್ಯವಂತರಾಗಿದ್ದರು. ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ನಿಯಮಿತವಾಗಿ ವಾಯುವಿಹಾರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಆದರೂ ಏಕಾಏಕಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.’ ಜೂನ್ 13 ರಂದು ನಗರ ಸಮೀಪದ ರಾಜಘಟ್ಟದ ಬಳಿ ಹೃದಯಾಘಾತದಿಂದ ಕಾರಿನಲ್ಲೇ ಮೃತಪಟ್ಟಿದ್ದ ದೇವರಾಜು ಅವರ ಪತ್ನಿ ಸುಮಾ ಅವರು ನೀಡಿದ ಮಾಹಿತಿ ಇದು. ‘ಅವರ ಮನೆಯಲ್ಲಿ ತಂದೆ–ತಾಯಿ ಸೇರಿದಂತೆ ಯಾರಿಗೂ ಹೃದಯ ಸಂಬಂಧಿ ಸಮಸ್ಯೆ ಇಲ್ಲ. ಅವರು ಆರೋಗ್ಯವಾಗಿದ್ದಾರೆ. ನನ್ನ ಪತಿ ಹೊರಗಡೆ ಏನನ್ನೂ ಸೇವಿಸುತ್ತಿರಲಿಲ್ಲ. ಮನೆಯ ಆಹಾರವನ್ನೇ ತೆಗೆದುಕೊಳ್ಳುತ್ತಿದ್ದರು. ರಕ್ತದೊತ್ತಡ ಮಧುಮೇಹ ಹೃದಯ ತಪಾಸಣೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುತ್ತಿದ್ದರು’ ಎಂದು ವಿವರಿಸಿದರು. ‘ಮನೆಗೆ ಅವರೇ ಆಧಾರವಾಗಿದ್ದರು. ಮಕ್ಕಳ ಮೇಲೆ ಅಪಾರ ಪ್ರೀತಿ. ಈಗಲೂ ಮಕ್ಕಳು ಅಪ್ಪನನ್ನು ನೆನೆದು ಕಣ್ಣೀರಿಡುತ್ತಿದ್ದಾರೆ’ ಎಂದು ದುಃಖವನ್ನು ತೋಡಿಕೊಂಡರು.

ಜಿಲ್ಲೆಗೆ ಬರದ ಸಚಿವರು ಜಿಲ್ಲೆಯಲ್ಲಿ ಆತಂಕ ಹುಟ್ಟಿಸಿರುವ ಸರಣಿ ಹೃದಯಾಘಾತ ಸಾವು ಪ್ರಕರಣಗಳನ್ನು ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಜೆಡಿಎಸ್ ಜಿಲ್ಲಾ ವಕ್ತಾರ ರಘು ಹೊಂಗೆರೆ ಆಗ್ರಹಿಸಿದ್ದಾರೆ. ನಿತ್ಯ ಸಾವು ಸಂಭವಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಥವಾ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ-ಸೂಚನೆ ನೀಡದಿರುವುದು ದುರದೃಷ್ಟಕರ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಚಿವರು ಬಾಯಿ ಮಾತಿನಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇನ್ನಾದರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟ ಸಚಿವರು ಜಿಲ್ಲೆಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.