ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮ್ಸ್ ತಂಡಕ್ಕೆ ಅತ್ಯುತ್ತಮ ಜೀವ ರಕ್ಷಕ ಪ್ರಶಸ್ತಿ

Last Updated 3 ಡಿಸೆಂಬರ್ 2022, 14:46 IST
ಅಕ್ಷರ ಗಾತ್ರ

ಹಾಸನ: ಇಲ್ಲಿನ ಹಾಸನ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ (ಹಿಮ್ಸ್) ಮತ್ತೊಂದು ಪ್ರಶಸ್ತಿ ಪಡೆದಿದೆ. ಇತ್ತೀಚೆಗೆ ಬೆಂಗಳೂರಿನ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ವತಿಯಿಂದ ನಡೆದ ಸಮಾರಂಭದಲ್ಲಿ ಹಿಮ್ಸ್ ತಂಡಕ್ಕೆ ಅತ್ಯುತ್ತಮ ಜೀವ ರಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಾಧನೆಗೆ ಕಾರಣವಾದ ಹಿಮ್ಸ್‌ನ ಕೀಲು ಮತ್ತು ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ, ಸಂಸ್ಥೆಯ ಸ್ಕಿಲ್ ಲ್ಯಾಬ್ ನೋಡಲ್ ಅಧಿಕಾರಿ ಡಾ.ಶ್ರೀರಂಗ ಎನ್., ತಂಡದವರಿಗೆ ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್.ಬಿ.ಸಿ. ಅಭಿನಂದನೆ ಸಲ್ಲಿಸಿದ್ದಾರೆ.

ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಅಧೀನ ಸಂಸ್ಥೆಗಳ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಜೀವರಕ್ಷಕ ತಂಡಗಳನ್ನು ಸ್ಥಾಪಿಸಿದ್ದು, ಸಂಸ್ಥೆಯ ಎಲ್ಲ ವೈದ್ಯರು ತುರ್ತು ಚಿಕಿತ್ಸೆ ನೀಡುವ ಹಾಗೂ ಆಪತ್ಕಾಲದಲ್ಲಿ ಜೀವವನ್ನು ರಕ್ಷಿಸುವ ವಿಧಾನಗಳ ಬಗ್ಗೆ ಈ ತಂಡವು ತರಬೇತಿ ನೀಡುತ್ತಿದೆ.

2015ರಿಂದ ಎಲ್ಲ ಸಂಸ್ಥೆಗಳ ಜೀವರಕ್ಷಕ ತಂಡಗಳು ನೀಡಿರುವ ತರಬೇತಿ, ಸಾಧಿಸಿದ ಗುರಿ ಹಾಗೂ ಅದರಿಂದ ಉಂಟಾಗಿರುವ ಸಕಾರಾತ್ಮಕ ಪರಿಣಾಮಗಳನ್ನು ಪರಿಗಣಿಸಲಾಗಿದೆ. ಜೊತೆಗೆ ಈ ತರಬೇತಿ ಪಡೆದ ವೈದ್ಯರು ಅತಿ ತುರ್ತು ಸಮಯದಲ್ಲಿ, ಈ ತರಬೇತಿಯ ಅನುಭವ ಉಪಯೋಗಿಸಿ ಇಬ್ಬರು ಸಣ್ಣ ಮಕ್ಕಳ ಜೀವ ಉಳಿಸಿರುವ ಉದಾಹರಣೆಗಳನ್ನೂ ಉಲ್ಲೇಖಿಸಲಾಗಿದೆ.

ಸಂಸ್ಥೆಯ ಎಲ್ಲ ಗೃಹವೈದ್ಯರು, ಕಿರಿಯ ಹಾಗೂ ಹಿರಿಯ ಸ್ಥಾನೀಯ ವೈದ್ಯರು, ಆಸಕ್ತಿ ಹೊಂದಿರುವ ಬಾಹ್ಯ ವೈದ್ಯರು, ದಂತ ವೈದ್ಯರಿಗೂ ಈ ತರಬೇತಿ ನೀಡಲಾಗುತ್ತಿದೆ. ಇದನ್ನೆಲ್ಲಾ ಪರಿಗಣಿಸಿ ರಾಜ್ಯದ 50ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳ ಪೈಕಿ ಹಾಸನದ ಹಿಮ್ಸ್ ಸಂಸ್ಥೆಯ ತಂಡಕ್ಕೆ ಅತ್ಯುತ್ತಮ ಜೀವ ರಕ್ಷಕ ತಂಡ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT