ಮಂಗಳವಾರ, ನವೆಂಬರ್ 24, 2020
22 °C
ಬೆಳಗಾವಿಯಲ್ಲಿ ಬಸವೇಶ್ವರ ಪ್ರತಿಮೆ ಭಗ್ನ

ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕ್ರಾಂತಿಕಾರಿ ಬಸವಣ್ಣನ ಪ್ರತಿಮೆ ಭಗ್ನಗೊಳಿಸಿರುವ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ
ವೀರಶೈವ ಲಿಂಗಾಯಿತ ಯುವ ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು
ಪ್ರತಿಭಟನೆ ನಡೆಸಿದರು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಬಿಚಗುಪ್ಪಿ ಗ್ರಾಮದಲ್ಲಿ ಬಸವಣ್ಣವರ ಪ್ರತಿಮೆಯನ್ನು ನಾಲ್ಕು ದಿನಗಳ ಹಿಂದೆ
ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಆಯುಧದಿಂದ ಹೊಡೆದು ಕೈ ಕತ್ತರಿಸಲಾಗಿದೆ. ಸಮಾಜ ಸುಧಾರಕ, ವಚನಕಾರ, ಜಾತಿ ಪದ್ಧತಿ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಮಾನವತಾವಾದಿಗೆ ಮಾಡಿರುವ ದೊಡ್ಡ ಅವಮಾನ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸವಣ್ಣ 12ನೇ ಶತಮಾನ ಕಂಡ ಶ್ರೇಷ್ಠ ನಾಯಕ. ಇಂದಿಗೂ ಅವರ ವಚನಗಳು ಬದುಕಿಗೆ ದಾರಿ ದೀಪವಾಗಿದೆ. ಇಂತಹ ವ್ಯಕ್ತಿಗೆ ಅವಮಾನ ಮಾಡುವುದು ಖಂಡನೀಯ ಎಂದರು.

ವೀರಶೈವ ಲಿಂಗಾಯಿತ ಯುವ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್‌.ಅವಿನಾಶ್‌, ಉಪಾಧ್ಯಕ್ಷ ಶರತ್ ಭೂಷಣ್, ಕಾರ್ಯದರ್ಶಿ ವೀರೇಶ್‌ ಕುಮಾರ್,, ಗೌರವಾಧ್ಯಕ್ಷ ಎಚ್,ಎನ್.ನಾಗೇಶ್‌, ಬಿ.ಎಚ್‌.ರೇಣುಕುಮಾರ್, ರಾಜು, ದಿಲೀಪ್ ಇದ್ದರು.

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.