ಹಳೇಬೀಡು: ಅಲ್ಪಾವಧಿ ಬೆಳೆ ಮಾಡಿಕೊಂಡು ಸಂಕಷ್ಟ ಎದುರಿಸುತ್ತಿರುವ ರೈತರು, ಹಲಸು ಕೃಷಿಗೆ ಮುಂದಾಗಿದ್ದಾರೆ. ಹಳೇಬೀಡು ಭಾಗದಲ್ಲಿ ಬೇಗ ಫಸಲು ಕೊಡುವ, ಅಧಿಕ ಇಳುವರಿಯ ಥಾಯ್ ಹೈಬ್ರಿಡ್ ತಳಿಯ ಹಲಸಿನ ಗಿಡಗಳನ್ನು ರೈತರು ನಾಟಿ ಮಾಡುತ್ತಿದ್ದಾರೆ.

ಕೇರಳದ ಫ್ಲೋರಿಜಾ ಕಂಪನಿ ಜೊತೆ ಮರು ಖರೀದಿ (ಬೈ ಬ್ಯಾಕ್) ಒಪ್ಪಂದ ಮಾಡಿಕೊಂಡು ರೈತರು ಹಲಸು ಕೃಷಿಯತ್ತ ಹೆಜ್ಜೆ ಹಾಕಿದ್ದಾರೆ. ಬೇಲೂರು ತಾಲ್ಲೂಕಿನ ಮಲೆನಾಡು ಹಾಗೂ ಬಯಲು ಸೀಮೆ ಎರಡೂ ಭಾಗದಲ್ಲಿಯೂ ಹಲಸು ಬೆಳೆಯಲಾಗಿದೆ. ಆದರೆ ಹಲಸು ಇಲ್ಲಿಯ ವಾಣಿಜ್ಯ ಬೆಳೆಯಾಗಿಲ್ಲ. ಜಮೀನಿನ ಬದು ಇಲ್ಲವೇ, ಬೇಲಿ ಸಾಲಿನಲ್ಲಿ ಹವ್ಯಾಸಕ್ಕಾಗಿ ಒಂದೆರೆಡು ಮರಗಳನ್ನು ಬೆಳೆಸುತ್ತಾರೆ. ಈಗ ವಾಣಿಜ್ಯ ಬೆಳೆಯಾಗಿ ಹಲಸು ಬೆಳೆಯಲು ರೈತರು ಮುಂದಾಗಿದ್ದಾರೆ.

ಥಾಯ್ ಹೈಬ್ರಿಡ್ ತಳಿಯ ಹಲಸಿನ ಗಿಡಗಳು 30 ವರ್ಷ ಫಸಲು ಕೊಡುತ್ತವೆ. ನಿರ್ವಹಣೆಗೆ ಅನುಗುಣವಾಗಿ ಒಂದು ಗಿಡವು ವರ್ಷಕ್ಕೆ 100 ರಿಂದ 200 ಕೆ.ಜಿ.ವರೆಗೆ ಫಸಲು ಕೊಡುತ್ತವೆ. ಸಾವಯವ ಪದ್ದತಿಯಲ್ಲಿಯೇ ಹಲಸಿನ ಗಿಡ ಬೆಳಸುತ್ತೇವೆ ಎಂದು ರೈತರು ಒಪ್ಪಂದ ಮಾಡಿಕೊಂಡಿದ್ದಾರೆ. ಕಂಪನಿ ಕರ್ನಾಟಕದಲ್ಲಿ 6ಸಾವಿರ ಎಕರೆ ಹಲಸು ಬೆಳೆಯುವ ಗುರಿ ಹೊಂದಿದ್ದು, 3,500 ಎಕರೆ ಪ್ರದೇಶದಲ್ಲಿ ಈಗಾಗಲೇ ಹಲಸಿನ ಗಿಡಗಳನ್ನು ನಾಟಿ ಮಾಡಲಾಗಿದೆ.

ನಾಟಿ ಮಾಡಿದ ಒಂದೇ ವರ್ಷದಲ್ಲಿ ಹಲಸಿನ ಗಿಡಗಳಲ್ಲಿ ಫಸಲು ಆರಂಭವಾಗುತ್ತದೆ. ಗಿಡಗಳ ಆರೋಗ್ಯಕರ ಬೆಳವಣಿಗೆಗಾಗಿ 3 ವರ್ಷದವರೆಗೆ ಹಲಸಿನ ಮಿಡಿಗಳನ್ನು ಗಿಡದಿಂದ ತೆರವು ಮಾಡಲಾಗುತ್ತದೆ. ನಂತರ ಗಿಡದಲ್ಲಿ ಹೆಚ್ಚಿನ ಚಿಗುರೊಡೆಯುವಂತೆ ರೆಂಬೆಗಳನ್ನು ಕತ್ತರಿಸಲಾಗುತ್ತದೆ. ಕತ್ತರಿಸಿದ ಸೊಪ್ಪನ್ನು ಆಡು, ಕುರಿಗಳಿಗೆ ಮೇವಾಗಿ ಬಳಸಬಹುದು. ಇಲ್ಲವೇ ಹೊಲದಲ್ಲಿ ಸಾವಯವ ಗೊಬ್ಬರವಾಗಿ ಬಳಕೆ ಮಾಡಬಹುದು ಎನ್ನುತ್ತಾರೆ ಕಾಡು ಕೃಷಿಕ ಮಲ್ಲಾಪುರದ ರವಿ.

ಹಲಸಿನ ಗಿಡ ಯಥೇಚ್ಛವಾಗಿ ಆಮ್ಲಜನಕ ಪೂರೈಕೆ ಮಾಡುತ್ತದೆ. ಹಲಸಿನ ಬೆಳೆಗಾರರಯ ಕಾರ್ಬನ್ ಪ್ರಮಾಣ ಪತ್ರವನ್ನು ವಾಯು ಮಾಲಿನ್ಯ ಇಲಾಖೆಯಿಂದ ಪಡೆಯಬಹುದು. ಪ್ರಮಾಣಪತ್ರ ಪಡೆದ ರೈತರಿಗೆ ಸಾಕಷ್ಟು ಅನುಕೂಲಗಳಿವೆ. ಮೋಡಗಳನ್ನು ಆಕರ್ಷಿಸಿ ಮಳೆ ತರುವ ಗುಣಲಕ್ಷಣ ಹೊಂದಿದೆ. ಹಲಸು ರುಚಿಕರವಾದ ಹಣ್ಣು ಕೊಡುವುದಲ್ಲದೆ, ಹಲಸಿನ ಕಾಯಿ ಹಾಗೂ ಹಣ್ಣಿನಿಂದ ವಿವಿಧ ಖಾದ್ಯ ತಯಾರಿಸಬಹುದು. ಕರಾವಳಿ ಜಿಲ್ಲೆಗಳಲ್ಲಿ ಹಲಸನ್ನು ವಿವಿಧ ರೀತಿಯಲ್ಲಿ ಸೇವನೆ ಮಾಡಿ ಆರೋಗ್ಯ ಪಡೆಯುತ್ತಿದ್ದಾರೆ ಎಂದು ರೈತ ರವಿ ತಿಳಿಸಿದರು.

ಎರಡು ಎಕರೆ ಜಮೀನಿನಲ್ಲಿ ಹಲಸಿನ ಕೃಷಿ ಕೈಗೊಂಡಿದ್ದೇವೆ. ಎಕರೆಗೆ 300 ಗಿಡ ನಾಟಿ ಮಾಡಬಹುದು ಎಂದು ಕಂಪನಿಯವರು ಹೇಳುತ್ತಾರೆ. ಜಮೀನಿನಲ್ಲಿ ಮಾವಿನ ಮರಗಳು ಇರುವುದರಿಂದ 480 ಗಿಡಗಳನ್ನು ನಾಟಿ ಮಾಡಿದ್ದೇವೆ ಎನ್ನುತ್ತಾರೆ ಬೆಳೆಗಾರ ಅಶೋಕ್.

ಇಲಾಖೆಯಲ್ಲಿ ಹಲಸಿನ ಕೃಷಿಗೆ ಮಹತ್ವ ಇದೆ. ಹಲಸು ಬೆಳೆಯುವ ರೈತರು ಎನ್.ಆರ್.ಇ.ಜಿ ಸೌಲಭ್ಯ ಪಡೆಯಬಹುದು. ಬೆಳೆಗಾರರು ತೋಟಗಾರಿಕಾ ಅಧಿಕಾರಿಗಳಿಂದ ಸಲಹೆ ಸೂಚನೆ ಪಡೆಯಬಹುದು
ಸತೀಶ್ ಕೆ.ಬಿ. ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ಕಾರ್ಮಿಕರ ಸಮಸ್ಯೆಯಿಂದ ಅಲ್ಪಾವಧಿ ಕೃಷಿ ಕಷ್ಟವಾಗುತ್ತಿದೆ. ಕಂಪನಿ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವ ಭರವಸೆ ಕೊಟ್ಟಿರುವುದರಿಂದ ಹಲಸಿನ ಕೃಷಿಗೆ ಕೈ ಹಾಕಲಾಗಿದೆ.
ಅಶೋಕ್ ಹಳೇಬೀಡು ರೈತ

ಹಲಸಿನ ಕಾಯಿ ಸಂಗ್ರಹಣೆ ಹಾಗೂ ಪೌಡರ್ ಉತ್ಪಾದಿಸುವ ಘಟಕಗಳನ್ನು ಹೆಚ್ಚು ಬೆಳೆಗಾರರು ಇರುವ ಜಿಲ್ಲೆಗಳಲ್ಲಿ ಆರಂಭಿಸುವ ಗುರಿಯನ್ನು ಕಂಪನಿ ಹೊಂದಿದೆ. ಇದರಿಂದ ಉದ್ಯೋಗವಕಾಶ ಹೆಚ್ಚಲಿದೆ
ನಟರಾಜ್ ಫ್ಲೋರಿಜಾ ಕಂಪನಿ ಯೋಜನಾ ವ್ಯವಸ್ಥಾಪಕ

ಹಲಸಿನ ಪೌಡರ್ ತಯಾರಿಕೆ

ಔಷಧ ಹಾಗೂ ಪೌಷ್ಟಿಕ ಆಹಾರಕ್ಕೆ ಬಳಕೆ ಆಗುವ ಹಲಸಿನ ಕಾಯಿಯ ಪೌಡರ್ ತಯಾರಿಸಲಾಗುತ್ತದೆ. ಹಲಸಿನ ಕಾಯಿಯ ಪೌಡರ್ ಮಧುಮೇಹ ಕ್ಯಾನ್ಸರ್ ಹಾಗೂ ಥೈರಾಯ್ಡ್ ಕಾಯಿಲೆ ಇದ್ದವರಿಗೆ ಉಪಯುಕ್ತವಾಗಲಿದೆ. ಹಲಸಿನ ಕಾಯಿಯ ಪೌಡರಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಕೊಪ್ಪಳದಲ್ಲಿ ಪೌಡರ್ ತಯಾರಿಸುವ ಫ್ಯಾಕ್ಟರಿ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಹಾಸನ ಜಿಲ್ಲೆಯಲ್ಲಿ ಹಲಸಿನ ಕೃಷಿಗೆ ಪೂರಕ ವಾತಾವರಣ ಇರುವುದರಿಂದ ರೈತರು ಹಲಸಿನ ಗಿಡಗಳನ್ನು ಬೆಳೆಸಲು ಆಸಕ್ತರಾಗಿದ್ದಾರೆ ಎಂದು ಫ್ಲೋರಿಜಾ ಕಂಪನಿ ನಟರಾಜ್ ತಿಳಿಸಿದರು. ಹಲಸಿನ ಕಾಯಿಯ ಪೌಡರ್ನಿಂದ ಗಂಜಿ ಮಾಡಿಕೊಂಡು ಸೇವಿಸಬಹುದು. ಹಾಲಿನೊಂದಿಗೂ ಸೇವಿಸಬಹುದು. ವಿವಿಧ ಆಹಾರ ತಯಾರಿಸಬಹುದು ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.