ಜಾವಗಲ್: ಹಿಂದೂಗಳು ಎಚ್ಚೆತ್ತುಕೊಳ್ಳುವ ಮೂಲಕ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಮಾರಗೊಂಡನಹಳ್ಳಿಯ ವಿರಕ್ತಮಠದ ಅಭಿನವ ಬಸವಲಿಂಗ ಸ್ವಾಮೀಜಿ ಹೇಳಿದರು.

ಜಾವಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶವು ಭವ್ಯ ಪರಂಪರೆ ಹೊಂದಿರುವ ದೇಶ. ಇಲ್ಲಿ ಅನೇಕ ಸಂಸ್ಕೃತಿ, ಆಚಾರ, ವಿಚಾರ, ಜಾತಿ, ಪಂಥ, ಪಂಗಡ, ಹಾಗೂ ಉಪ ಪಂಗಡಗಳಲ್ಲಿ ವಿವಿಧತೆ ಇದ್ದರೂ ಎಲ್ಲರೂ ಒಂದು. ಸಮಾಜವನ್ನು ಒಗ್ಗೂಡಿಸುವ ಸಲುವಾಗಿ ಎಲ್ಲಾ ಹಿಂದೂಗಳು ತಮ್ಮ ಜಾತಿ, ಪಂಗಡಗಳನ್ನು ಮನೆಗೆ ಸೀಮಿತಗೊಳಿಸುವ ಮೂಲಕ ಸಮಾಜ ಸೇವೆಗಾಗಿ ಒಗ್ಗೂಡಬೇಕು ಎಂದು ಸಲಹೆ ನೀಡಿದರು.

ಪೋಷಕರು ತಮ್ಮ ಮಕ್ಕಳಿಗೆ ದೇಶಪ್ರೇಮದ ಕಥೆಗಳನ್ನು ತಿಳಿಸುವ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಬೇಕು ಎಂದು ತಿಳಿಸಿದರು.

ಹಿಂದೂ ಸಮಾಜೋತ್ಸವ ಸಮಿತಿಯ ತಾಲ್ಲೂಕು ಅಧ್ಯಕ್ಷ ಸಂಪತ್, ಸಾಮಾಜಿಕ ಚಿಂತಕರಾದ ಮಹಿಪಾಲ್, ಬಿಜೆಪಿ ಬೇಲೂರು ಪ್ರಧಾನ ಮಂಡಲದ ಕಾರ್ಯದರ್ಶಿ ರಮೇಶ್, ಬಿಜೆಪಿ ಪ್ರತಿನಿಧಿ ರೇಣುಕಾ ಪ್ರಸಾದ್, ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಧರ್ಮೇಂದ್ರ, ಗ್ರಾಮ ಪಂಚಾಯಿತಿ ಸದಸ್ಯ ಮಾರಗೊಂಡನಹಳ್ಳಿ ನವೀನ್, ವಿಟಿಎಸ್ ನಾಗರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.