ಶನಿವಾರ, ಜೂನ್ 19, 2021
27 °C

ಪೊಲೀಸರ ಸೋಗಿನಲ್ಲಿ ಬಂದು ಚಿನ್ನಾಭರಣ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಪೊಲೀಸರೆಂದು ಪರಿಚಯಿಸಿಕೊಂಡು ಮನೆಗೆ ನುಗ್ಗಿರುವ ನಾಲ್ವರು, ₹ 75 ಸಾವಿರ ಮೌಲ್ಯದ 25 ಗ್ರಾಂ ಚಿನ್ನಾಭರಣ ಕಳವು ಮಾಡಿರುವ ಘಟನೆ ತಾಲ್ಲೂಕಿನ ಗೌಡಗೆರೆ ಹೊಸೂರು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಲವಣ್ಣಗೌಡ ಎಂಬುವವರ ತೋಟದ ಮನೆಯಲ್ಲಿ ಈ  ಪ್ರಕರಣ ನಡೆದಿದೆ. ಇನೊವಾ ಕಾರಿನಲ್ಲಿ ಬಂದ ನಾಲ್ವರು, ಪೊಲೀಸರೆಂದು ನಂಬಿಸಿ ಮನೆ ಪ್ರವೇಶಿಸಿದ್ದಾರೆ. ನಿಮ್ಮ ಮಗ ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಬಂದಿದ್ದಾನೆ ಎಂದಿದ್ದಾರೆ. ನನ್ನ ಮಗ ಚಾಮರಾಜನಗರದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಲವಣ್ಣಗೌಡ ಹೇಳಿದ್ದಾರೆ. ಆಗ ಕುಟುಂಬದವರನ್ನು ಹೆದರಿಸಿ ಒಂದೆಡೆ ಕೂರಿಸಿ, ಬೀರುವಿನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.