ನಾಟಿ ಮಾಡಿರುವ ಹೊಗೆಸೊಪ್ಪು ಸಸಿಗಳನ್ನು ಉಳಿಸಿಕೊಳ್ಳಲು ತುಂತುರು ನೀರಾವರಿ ಮೂಲಕ ಸಸಿಗಳಿಗೆ ನೀರು ಒದಗಿಸುತ್ತಿರುವುದು.
ಬೆಳೆಸಿದ ಹೊಗೆಸೊಪ್ಪು ಸಸಿಗಳು ನಾಟಿಗೆ ಹದವಾಗಿದ್ದು 20 ದಿನಗಳಿಂದ ಮಳೆಗಾಗಿ ಕಾಯುತ್ತಿದ್ದೇವೆ. ಸಸಿಗಳು ಬಲಿತು ಹಾಳಾದಲ್ಲಿ ಮತ್ತೆ ಹೊಸ ಸಸಿ ಬೆಳೆಸಲು 2 ತಿಂಗಳು ಬೇಕಾಗುತ್ತದೆ ಎಂಬ ಕಾರಣಕ್ಕೆ ನೀರು ಹಾಯಿಸಿಕೊಂಡು ಸಸಿ ನೆಡುತ್ತಿದ್ದೇವೆ.
ರಮೇಶ ಬಿದರೂರು ಗ್ರಾಮದ ತಂಬಾಕು ಬೆಳೆಗಾರ
ಮಂಡಳಿಯ ನಿಯಮದಂತೆ ಮೇ ಮೊದಲ ವಾರ ನಾಟಿಗೆ ಸರಿಯಾದ ಸಮಯವಾಗಿದ್ದು ಬೆಳೆಗಾರರು ಮುಂಚೆಯೇ ಸಸಿಗಳನ್ನು ಬೆಳೆಸಿಕೊಂಡಿದ್ದರಿಂದ ಮಳೆಯ ಕೊರತೆಯ ನಡುವೆಯೆ ನೀರು ಹಾಕಿಕೊಂಡು ನಾಟಿ ಮಾಡಲು ಮುಂದಾಗಿದ್ದಾರೆ.