ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆನರಸೀಪುರ: ದಾಖಲಾತಿಯಿದ್ದರೂ, ಸೌಲಭ್ಯದ ಕೊರತೆ

ಕುಳಿತು ಪಾಠ ಕಲಿಯುವ ಅನಿವಾರ್ಯ
Last Updated 28 ಮೇ 2022, 4:06 IST
ಅಕ್ಷರ ಗಾತ್ರ

ಹೊಳೆನರಸೀಪುರ: ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಠ ಪ್ರವಚನಗಳು ಚೆನ್ನಾಗಿ ನಡೆಯುತ್ತಿದ್ದರೂ, ಶಾಲೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಕನ್ನಡ ಶಾಲೆಯಲ್ಲಿ ಇಂಗ್ಲೀಷ್ ಭಾಷೆ ಉತ್ತಮವಾಗಿ ಕಲಿಸುತ್ತಿದ್ದು, ಉತ್ತಮ ಹೆಸರು ಗಳಿಸಿದೆ.

ಆದ್ದರಿಂದ ಈ ಶಾಲೆಗೆ ಹೆಚ್ಚು ಮಕ್ಕಳನ್ನು ಸೇರಿಸುತ್ತಿದ್ದು, ಈ ಸಲ 110 ಮಕ್ಕಳೂ ಸೇರಿ 1 ರಿಂದ 7ನೇ ತರಗತಿವರೆಗೆ ಒಟ್ಟು 630 ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿ ಹೆಚ್ಚು ಮಕ್ಕಳಿದ್ದು ಮಕ್ಕಳ ಸಂಖ್ಯೆಗೆ ತಕ್ಕಂತೆ ಸೌಲಭ್ಯಗಳಿಲ್ಲ. ಮಕ್ಕಳ ಪಾಠಕ್ಕಾಗಿ 9 ಕೊಠಡಿಗಳಿದ್ದು 40 ರಿಂದ 45 ಮಕ್ಕಳು ಕುಳಿತು ಕಲಿಯಬಹುದಾದ ಜಾಗದಲ್ಲಿ 70 ಮಕ್ಕಳು ಕುಳಿತು ಕಲಿಯುವ ಅನಿವಾರ್ಯತೆ ಇದೆ.

ಸೌಕರ್ಯ ಕೊರತೆ: ‘ಅಗತ್ಯಕ್ಕೆ ತಕ್ಕಷ್ಟು ಶೌಚಾಲಯ ಇಲ್ಲ. ಮುಖ್ಯವಾಗಿ ಮದ್ಯಾಹ್ನದ ಬಿಸಿ ಊಟ ಸೇವಿಸಲು ತೀವ್ರ ತೊಂದರೆ ಆಗುತ್ತಿದ್ದು ಎಲ್ಲ ಮಕ್ಕಳು ಶಾಲೆಯ ಆವರಣದ ಒಳಗೆ ಬಿಸಿಲಲ್ಲಿ, ಸಾಲಾಗಿ ನಿಂತು ಊಟ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಶಾಲೆಯ ಸ್ಥಿತಿಯನ್ನು ನೋಡಿರುವ ಪೋಷಕರು ಈ ಶಾಲೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಗಮನಸೆಳೆದ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ‘ಈ ಶಾಲೆಯಲ್ಲಿ ಮಕ್ಕಳಿಗೆ ಸ್ಥಳಾವಕಾಶ ಕಡಿಮೆ ಇದ್ದು ತೊಂದರೆ ಆಗುತ್ತಿರುವ ಬಗ್ಗೆ ಗಮನಿಸಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಈ ಜಾಗದಲ್ಲಿ ಹೆಚ್ಚಿನ ಕೊಠಡಿಗಳನ್ನು ಕಟ್ಟಲು ಸ್ಥಳಾವಕಾಶ ಇಲ್ಲದ ಕಾರಣ 6 ಮತ್ತು 7 ನೇ ತರಗತಿ ಮಕ್ಕಳನ್ನು ಗಾಂಧಿವೃತ್ತದ ಪಾರ್ಕ್ ಸಮೀಪದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಚಿಂತಿಸಿ ಈ ಬಗ್ಗೆ ಪೋಷಕರ ಸಭೆ ಕರೆದಿದ್ದೇನೆ.

ಈ ಎರಡು ತರಗತಿಗಳನ್ನು ಸ್ಥಳಾಂತರಿಸಿದರೆ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಂತಾಗುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT