ಮೈಸೂರು ವಿವಿ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳಲ್ಲಿ ಪದವಿ ಮುಗಿದರೂ ಸಿಗದ ಅಂಕಪಟ್ಟಿ
ಡಿಜಿಲಾಕರ್, ಯಯುಸಿಎಂಎಸ್‌ನಿಂದ ಪಡೆಯಲು ಆದೇಶ: ವಿದ್ಯಾರ್ಥಿಗಳಿಗೆ ತೊಂದರೆ
ಎಚ್.ವಿ. ಸುರೇಶ್‌ಕುಮಾರ್
Published : 24 ಜನವರಿ 2025, 5:16 IST
Last Updated : 24 ಜನವರಿ 2025, 5:16 IST
ಫಾಲೋ ಮಾಡಿ
Comments
ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮುಗಿಸಿ ವರ್ಷಗಳೇ ಕಳೆದರೂ ಅಂಕಪಟ್ಟಿ ಹಾಗೂ ಪದವಿ ಪ್ರಮಾಣಪತ್ರ ಸಿಗದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಹೇಮಾ ನಾಗೇಂದ್ರ ವಾಸವಿ ಕ್ಲಬ್ ಅಧ್ಯಕ್ಷೆ
2021 ರಿಂದ ಅಂಕಪಟ್ಟಿಯನ್ನು ಡಿಜಿ ಲಾಕರ್ ಮೂಲಕ ತೆಗೆದುಕೊಳ್ಳಬೇಕು ಎನ್ನುವ ನಿಯಮ ಇದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ಎನ್ನುವುದನ್ನು ಒಪ್ಪುತ್ತೇನೆ.
ಗುರುಮೂರ್ತಿ, ಹೊಳೆನರಸೀಪುರ ಮಹಿಳಾ ಕಾಲೇಜಿನ ಪ್ರಾಂಶುಪಾಲ
ವಿಶ್ವವಿದ್ಯಾಲಯ ಒಳ್ಳೆಯ ಉದ್ದೇಶದಿಂದ ಈ ಯೋಜನೆ ಮಾಡಿದೆ. ಆದರೆ ತಕ್ಷಣಕ್ಕೆ ಇದು ಸಾಧ್ಯವಾಗುವಂತಹ ತಂತ್ರಜ್ಞಾನ ಅಳವಡಿಸಬೇಕು ಎಂಬುದು ನನ್ನ ಮನವಿ.
ಪ್ರೊ.ಜಿ.ಡಿ. ನಾರಾಯಣ್ ಹಳೇಬೀಡು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ
ಪದವಿ ಪೂರ್ಣಗೊಳಿಸಿದ ನಂತರ ತನ್ನ ರೋಲ್ ನಂಬರ್ ನಮೂದಿಸಿ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಿದ ನಂತರ ನಿಯಮ ಜಾರಿ ಮಾಡಬೇಕಿತ್ತು
ಪ್ರೊ. ಭುವನೇಂದ್ರ ಪಡುವಲಹಿಪ್ಪೆ ದೇವೇಗೌಡ ಸರ್ಕಾರಿ ಕಾಲೇಜು ಪ್ರಾಧ್ಯಾಪಕ
ಹಲವು ವರ್ಷಗಳಿಂದ ಪದವಿ ಅಂಕಪಟ್ಟಿಗಳನ್ನು ವಿಶ್ವವಿದ್ಯಾಲಯದಿಂದಲೇ ನೀಡಲಾಗುತ್ತಿತ್ತು. ಡಿಜಿಟಲ್ ವ್ಯವಸ್ಥೆ ರೂಪಿಸಿದ ನಂತರ ನಿಯಮ ಮಾಡಬೇಕಿತ್ತು
ಪೂರ್ಣಿಮಾ ಹೊಳೆನರಸೀಪುರ, ಸರ್ಕಾರಿ ಕಾಲೇಜು ಸಹ ಪ್ರಾಧ್ಯಾಪಕಿ