ಗುರುವಾರ , ಫೆಬ್ರವರಿ 25, 2021
20 °C

ಚಾಕುವಿನಿಂದ ಇರಿದು ಯುವಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನರಾಯಪಟ್ಟಣ: ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ಡಿ.ಕಾಳೇನಹಳ್ಳಿಯಲ್ಲಿರುವ ಮಂಚಿಕಟ್ಟೆ ಬಳಿ ಮಂಗಳವಾರ ರಾತ್ರಿ ನಡೆದಿದೆ.

ಯಾಚೇನಹಳ್ಳಿಯ ಆನಂದ್ (24) ಕೊಲೆಯಾದ ಯುವಕ.

ಆರೋಪಿಗಳಾದ ಡಿ.ಕಾಳೇನಹಳ್ಳಿಯ ಪುನೀತ್, ಕಾರ್ತಿಕ, ವಿಜಯ್, ಚೇತನ್ ಹಾಗೂ ಗೌತಮ್ ಸೇರಿ ಇತರರು ತಲೆ ಮರೆಸಿಕೊಂಡಿದ್ದಾರೆ.

ಮಂಗಳವಾರ ಸಂಜೆ ಆರೋಪಿಗಳು ಮತ್ತು ಆನಂದನ ನಡುವೆ ಜಗಳ ನಡೆದಿತ್ತು. ಇದಾದ ಬಳಿಕ ರಾತ್ರಿ 10.45 ರಲ್ಲಿ ಅನಂದ್ ತನ್ನ ಸ್ನೇಹಿತ ರವಿ ಜೊತೆ ಬೈಕ್‌ನಲ್ಲಿ ಚನ್ನರಾಯಪಟ್ಟಣದಿಂದ ಊರಿಗೆ ತೆರಳುತ್ತಿದ್ದನು. ಕಾಳೇನಹಳ್ಳಿಯ ಹತ್ತಿರ ಇರುವ ಮಂಚಿಕಟ್ಟೆ ಬಳಿ ಆರೋಪಿಗಳು ಆನಂದ್ ಮತ್ತು ರವಿ ಅವರನ್ನು ತಡೆದಿದ್ದಾರೆ. ನಮ್ಮ ಜೊತೆ ಜಗಳ ಮಾಡುತ್ತೀಯಾ ಎಂದು ಆನಂದನನ್ನು ಅವಾಚ್ಯ ಪದಗಳಿಂದ ನಿಂದಿಸಿ ಚಾಕುವಿನಿಂದ ಕುತ್ತಿಗೆ, ಎದೆಗೆ ಚುಚ್ಚಿದ್ದಾರೆ. ಆನಂದ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಕಳೆದ 4 ತಿಂಗಳ ಹಿಂದೆ ಬಾಗೂರಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆನಂದ್ ಭಾಗಿಯಾಗಿ ಜೈಲು ಸೇರಿದ್ದನು. ಈಚೆಗೆ ಜಾಮೀನಿನ ಮೇಲೆ ಹೊರಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು