ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಶಾಸಕ ಬಾಲಕೃಷ್ಣರವರಿಗೆ ಸ್ವಾಗತ

Published 7 ಜುಲೈ 2024, 15:27 IST
Last Updated 7 ಜುಲೈ 2024, 15:27 IST
ಅಕ್ಷರ ಗಾತ್ರ

ಹಿರೀಸಾವೆ: ರಾಜ್ಯ ಒಕ್ಕಲಿಗರ ಸಂಘಕ್ಕೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಭಾನುವಾರ ಕ್ಷೇತ್ರಕ್ಕೆ ಆಗಮಿಸಿದ ಶಾಸಕ ಸಿ.ಎನ್. ಬಾಲಕೃಷ್ಣ ಅವರನ್ನು ಹೋಬಳಿಯ ಕಿರೀಸಾವೆ ಗಡಿಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು.

ನೂತನ ಅಧ್ಯಕ್ಷರು ಹಾಸನ ಜಿಲ್ಲೆಯ ಕಿರೀಸಾವೆ ಗಡಿಗೆ ಆಗಮಿಸಿದಾಗ, ಹಾರಗಳನ್ನು ಹಾಕಿ, ಶುಭಾಶಯ ಕೋರಿ, ಘೋಷಣೆಗಳನ್ನು ಕೂಗಿದರು. ನಂತರ ಶಾಸಕರು ಸೇತುವೆ ಗಡಿ ಆಂಜನೇಯ ಸ್ವಾಮಿಗೆ ಪೂಜೆಸಲ್ಲಿಸಿದರು.

ಮುಖಂಡರಾದ ಮರಗೂರು ಅನಿಲ್, ದಿಡಗ ವಾಸು, ಪುಟ್ಟರಾಜು, ರಘುರಾಮ್, ರೈತ ಸಂಘದ ಮೀಸೆ ಮಂಜಣ್ಣ, ಹಿರೀಸಾವೆಯ ಪಿಎಸಿಸಿಬಿ ಅಧ್ಯಕ್ಷ ಸೋಮಶೇಖರ್, ಎಚ್.ಜೆ. ಮಹೇಶ್, ರೋಡ್ ಮಂಜುನಾಥ್, ಬೋರೇಗೌಡ, ಬೀಡಾ ಮಂಜುನಾಥ್, ಪೈನಾಸ್ಸ್ ಮಹೇಶ್, ಬೆಳಗೀಹಳ್ಳಿ ಪುಟ್ಟಸ್ವಾಮಿ, ಆಯರಹಳ್ಳಿ ಪ್ರಭಾಕರ್ ಸೇರಿದಂತೆ ಪಕ್ಷದ ಮುಖಂಡರಾದ, ಕಾರ್ಯಕರ್ತರು  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT