ದಾದಿ ಸಿಬ್ಬಂದಿ ರೋಗಿಗಳ ಸಹಕಾರದಿಂದ ಪ್ರಶಸ್ತಿ
ಮೂರು ವರ್ಷದಲ್ಲಿ ಆರು ಮಾನದಂಡಗಳನ್ನು ಆಧರಿಸಿ ಪ್ರಶಸ್ತಿ ಕೊಡಲಾಗಿದೆ. ಹೆರಿಗೆ ಒಳ ಮತ್ತು ಹೊರ ರೋಗಿಗಳ ವಿಭಾಗ ಲ್ಯಾಬ್ ಆಡಳಿತ ವಿಭಾಗದ ವೈಖರಿ ದಾದಿಯರು ಹಳ್ಳಿಗಳಿಗೆ ಭೇಟಿ ನೀಡುವ ದಾಖಲು ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ದಾಖಲು ಪುಸ್ತಕಗಳನ್ನು ಸಲ್ಲಿಸಬೇಕು. ಪ್ರತಿಯೊಂದಕ್ಕೂ ಕ್ರಾಸ್ ಚೆಕ್ ಮಾಡುತ್ತಾರೆ. ಆಸ್ಪತ್ರೆಯಲ್ಲಿನ ದಾದಿ ಸಿಬ್ಬಂದಿ ರೋಗಿಗಳ ಸಹಕಾರದಿಂದ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ಸಂತೋಷ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತಿಮಾ ತಿಳಿಸಿದ್ದಾರೆ.