ಚನ್ನಕೇಶವಸ್ವಾಮಿ ಬ್ರಹ್ಮರಥೋತ್ಸವಕ್ಕೂ ಮುನ್ನ ಸೈಯದ್ ಸಜ್ಜಾದ್ ಬಾಷಾ ಖಾದ್ರಿಯವರು ದೇಗುಲದ ಒಳ ಆವರಣದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಪ್ರತಿ ವರ್ಷ ರಥೋತ್ಸವದಲ್ಲಿ ಸಂಘಟನೆಯಿಂದ ಸಾಂಸ್ಕೃತಿಕ ನಡೆಸುತ್ತಿದ್ದು ಶುಕ್ರವಾರ ಸಂಜೆ ದೇಗುಲದ ಮುಂಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಜನರು ಭಾಗವಹಿಸಬೇಕು.
ಎಸ್.ಎಂ. ರಾಜು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ
ಈ ಬಾರಿಯ ಜಾತ್ರೆಯನ್ನು ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ವಿಶೇಷವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಶಾಸಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿ ಜಾತ್ರೆಗೆ ಕಳೆ ನೀಡಿದ್ದಾರೆ.
ಸನ್ಯಾಸಿಹಳ್ಳಿ ನರೇಂದ್ರ ಬಿಜೆಪಿ ಮುಖಂಡ
ಕ್ಷೇತ್ರದ ಹಾಗೂ ನಾಡಿನ ಜನರಿಗೆ ಒಳಿತಾಗಲಿ. ಕ್ಷೇತ್ರದ ಅಭಿವೃದ್ದಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡುವ ಬುದ್ದಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ