ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕಾರ ಶಾಶ್ವತ ಅಲ್ಲ ಕೆಲಸ ಶಾಶ್ವತ: ಶಾಸಕ ಕೆ.ಎಂ. ಶಿವಲಿಂಗೇಗೌಡ

Published 23 ಜೂನ್ 2024, 16:16 IST
Last Updated 23 ಜೂನ್ 2024, 16:16 IST
ಅಕ್ಷರ ಗಾತ್ರ

ಅರಸೀಕೆರೆ: ತಾಲ್ಲೂಕಿನ ತಳಲೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ವಿಠಲಪುರ ಚಂದ್ರಣ್ಣ ಶನಿವಾರ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು,‘ಸರ್ಕಾರ ರೂಪಿಸಿರುವ ಯೋಜನೆ ಸರಿಯಾದ ಫಲಾನುಭವಿಗೆ ಸಿಗುವಂತೆ ಮಾಡಬೇಕು. ಇದ್ದರಿಂದ ಮಾತ್ರ ಮಾಡಿದ ಕೆಲಸಕ್ಕೆ ಗೌರವ ಸಿಗುತ್ತದೆ. ಅಧಿಕಾರ ಶಾಶ್ವತ ಅಲ್ಲ ಕೆಲಸಗಳು ಶಾಶ್ವತವಾಗಿರುತ್ತವೆ. ಗ್ರಾಮಗಳು ಮತ್ತು ರೈತರು ಸರ್ವಾಂಗೀಣ ಅಭಿವೃದ್ದಿಗೆ ನಮ್ಮ ಸಹಕಾರವಿರುತ್ತದೆ. ಗ್ರಾಮಗಳಲ್ಲಿ ಅಧ್ಯಕ್ಷರು ಉತ್ತಮ ಭಾಂದವ್ಯ ಹೊಂದಿ ಅವರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಬೆಳಸಿಕೊಳ್ಳಬೇಕು’ ಎಂದು ಹೇಳಿದರು.

ನೂತನ ಅಧ್ಯಕ್ಷ ಚಂದ್ರಣ್ಣ ಮಾತನಾಡಿ,‘ಶಾಸಕರ ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಗ್ರಾಮದ ರೈತರು ಸಂಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ಪಂಚಾಯಿತಿ ವ್ಯಾಪ್ತಿಯ ಸದಸ್ಯರ ಬೆಂಬಲದೊಂದಿಗೆ ಸರ್ಕಾರದ ಯೋಜನೆ ತಿಳಿದುಕೊಂಡು ಗ್ರಾಮ ಹಾಗೂ ರೈತರು ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಹೇಳಿದರು.

ಗ್ರಾಮಪಂಚಾಯಿತಿ ಸದಸ್ಯರಾದ ಗುರುಮೂರ್ತಿ, ಅಣ್ಣಪ್ಪ, ವೀರಣ್ಣ, ಮುಖಂಡರಾದ ರಂಗಪ್ಪ, ದೇವರಾಜ, ಬೆಳ್ಳಿ, ಸುಂದರರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT