ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗಾಸನ: 200 ಆಸನಗಳಲ್ಲಿ ಪ್ರಾವೀಣ್ಯ ಪಡೆದ ರುಥ್ವಿ

ಯೋಗಾಸನ, ಕ್ರೀಡೆ, ನೃತ್ಯದಲ್ಲಿ ಸಾಧನೆ ಮಾಡಿದ ಬಹುಮುಖ ಪ್ರತಿಭೆ
ಸಿದ್ದರಾಜು
Published 17 ಜೂನ್ 2024, 6:43 IST
Last Updated 17 ಜೂನ್ 2024, 6:43 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಮತ್ತೆ ಪ್ರಪಂಚ ಸಜ್ಜಾಗಿದೆ. ಭಾರತದ ಕೊಡುಗೆಯಾದ ಯೋಗಾಸನ ಇಂದು ಗಡಿ, ಭಾಷೆ ಮೀರಿ ಬೆಳೆದು ನಿಂತಿದೆ. ಯೋಗಾಸನ ಮಾಡುವುದು ಜೀವನ ಶೈಲಿಯಾಗಿ ಮಾರ್ಪಟ್ಟಿದೆ.

ಪಟ್ಟಣದ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎ.ಎಂ. ರುಥ್ವಿ, ನಾಲ್ಕು ವರ್ಷಗಳಿಂದ ಯೋಗಾಸನದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ವೃಕ್ಷಾಸನ, ಅರ್ಧ ಚಕ್ರಾಸನ, ಭದ್ರಾಸನ, ವಜ್ರಾಸನ, ಶಶಂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಪವನಮುಕ್ತಾಸನ, ಭ್ರಾಮರಿ ಪ್ರಾಣಾಯಾಮ, ಕಪಾಲಭಾತಿ ಕ್ರಿಯೆ, ಶವಾಸನ, ನಾಡಿ ಶೋಧನ, ಶೀತಲಿ ಪ್ರಾಣಾಯಾಮ. ಕಷ್ಟಕರವಾದ ಆಸನಗಳಾದ ವಾಮದೇವತಿಪ್ರುರಾಸನ, ಗಂಡಭೇರುಂಡ ಆಸನ, ಪೂರ್ಣ ಚಕ್ರಬಂಧಾಸನ, ಋಶ್ವಿಕ ಆಸನ, ಬ್ರಹ್ಮಸ್ತ್ರ ಆಸನ, ದ್ವಿಪದ ಕೋಕಿಲಾಸನ ಸೇರಿ ಅಂದಾಜು 200 ಆಸನ ಪ್ರದರ್ಶಿಸಿದ್ದಾಳೆ.

‘ಯೋಗಾಸಾನ, ಪ್ರಾಣಾಯಾಮದ ವಿವಿಧ ಪ್ರಕಾರವನ್ನು ಅಭ್ಯಾಸ ಮಾಡುವುದರಿಂದ ಏಕಾಗ್ರತೆ, ಆತ್ಮಸ್ಥೈರ್ಯ, ಕ್ರಿಯಾಶೀಲತೆ, ಬುದ್ದಿಶಕ್ತಿ ಚುರುಕುಗೊಳ್ಳುತ್ತದೆ. ಇದರಿಂದ ವ್ಯಾಸಂಗದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ’ ಎಂಬ ಅಭಿಮತ ರುಥ್ವಿಯದು.

ಚಿಕ್ಕಂದಿನಿಂದಲೇ ದೇಹವನ್ನು ಸುಲಭವಾಗಿ ದಂಡಿಸಲು ಅವಕಾಶ ಇರುವುದರಿಂದ ನಾಲ್ಕನೇ ತರಗತಿಯಲ್ಲಿ ಓದುತ್ತಿರುವಾಗಲೇ. ಯೋಗಾಸನ ಕಲಿಯಲು ಆರಂಭಿಸಿದಳು. ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ಗಳಿಸಿದ್ದಾಳೆ. ಯೋಗಾಸನದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಂಬಲದಿಂದ ನಿತ್ಯ ಬೆಳಿಗ್ಗೆ ಆನ್‌ಲೈನ್ ಮೂಲಕ 2 ಗಂಟೆ ತರಬೇತಿ ಪಡೆಯುತ್ತಿದ್ದಾಳೆ. ಯೋಗಗುರುಗಳಾದ ಚಂದ್ರು, ಶರತ್, ಕೆ.ಆರ್. ನವೀನ್ ತರಬೇತಿ ನೀಡಿದ್ದಾರೆ. ಸದ್ಯ ಕಡೂರಿನ ಕೆ.ಆರ್. ನವೀನ್ ಆನ್‍ಲೈನ್ ತರಬೇತಿ ನೀಡುತ್ತಿದ್ದಾರೆ.

‘ಯೋಗಾಸನ, ಪ್ರಾಣಾಯಾಮ ಕಲಿಕೆಯಿಂದ ಮನಸ್ಸು ಸದಾ ಉಲ್ಲಾಸದಿಂದ ಇರುವಂತೆ ಮಾಡುತ್ತದೆ. ಯೋಗಾಸನ ಕಲಿಕೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಂಜೀವಿನಿ ಇದ್ದಂತೆ’ ಎನ್ನುತ್ತಾಳೆ ರುಥ್ವಿ.

ಭದ್ರಾವತಿ, ಮೈಸೂರು, ಕೋರಮಂಗಲ, ನವದೆಹಲಿ ಸೇರಿ 50 ಯೋಗಾಸನ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ರುಥ್ವಿ ಮುಡಿಗೇರಿಸಿಕೊಂಡಿದ್ದಾಳೆ.

ಎ.ಎಂ.ರುಥ್ವಿ ಪ್ರದರ್ಶಿಸಿದ ಯೋಗಾಸನದ ಭಂಗಿ
ಎ.ಎಂ.ರುಥ್ವಿ ಪ್ರದರ್ಶಿಸಿದ ಯೋಗಾಸನದ ಭಂಗಿ
ಎ.ಎಂ.ರುಥ್ವಿ ಪ್ರದರ್ಶಿಸಿದ ಯೋಗಾಸನದ ಭಂಗಿ
ಎ.ಎಂ.ರುಥ್ವಿ ಪ್ರದರ್ಶಿಸಿದ ಯೋಗಾಸನದ ಭಂಗಿ
ರುಥ್ವಿ ಚಿಕ್ಕಂದಿನಲ್ಲಿಯೇ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾಳೆ. ಮಗಳ ಸಾಧನೆಗೆ ಬಿಜಿಎಸ್ ಶಿಕ್ಷಣ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ.
ಕೆ. ಮಂಜುನಾಥ– ಪೂರ್ಣಿಮಾ ರುಥ್ವಿ ಪೋಷಕರು
ಕ್ರೀಡೆ ನೃತ್ಯದಲ್ಲೂ ಸೈ
2023ರಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯಂದು ಆನ್‍ಲೈನ್‍ನಲ್ಲಿ ಕೇವಲ ಒಂದು ನಿಮಿಷದಲ್ಲಿ 10 ಯೋಗಾಸನದ ಪ್ರಕಾರವನ್ನು ಪ್ರದರ್ಶಿಸುವ ಮೂಲಕ ವರ್ಲ್ಡ್‌ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿರುವುದು ರುಥ್ವಿ ಸಾಧನೆಯ ಮತ್ತೊಂದು ಗರಿ. ಯೋಗಾಸನ ಮಾತ್ರವಲ್ಲದೇ ನೃತ್ಯದಲ್ಲಿಯೂ ಹೆಸರು ಮಾಡಿರುವ ಈಕೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಸೋಲೋ ನೃತ್ಯ ಹಾಗೂ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗುವ ಡಿಕೆಡಿಯಲ್ಲಿ ಪ್ರದರ್ಶನ ನೀಡಿರುವ ಹೆಗ್ಗಳಿಕೆ ಇದೆ. 100 200 ಮೀಟರ್ ಓಟದ ಸ್ಪರ್ಧೆ ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಾಳೆ. ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಸಾಧನೆಯ ಮೈಲಿಗಲ್ಲು ಸಾಧಿಸುತ್ತಿರುವ ಈಕೆಯನ್ನು ಹಲವು ಸಂಘ–ಸಂಸ್ಥೆಗಳು ಸನ್ಮಾನಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT