ಸಕಾಲ: ಹಾಸನಕ್ಕೆ ಪ್ರಥಮ ಸ್ಥಾನದ ಗರಿ, ಉಡುಪಿ ದ್ವಿತೀಯ, ಚಿಕ್ಕಮಗಳೂರು ತೃತೀಯ

ಸೋಮವಾರ, ಮೇ 27, 2019
33 °C
ಬೀದರ್‌ ಕೊನೆ

ಸಕಾಲ: ಹಾಸನಕ್ಕೆ ಪ್ರಥಮ ಸ್ಥಾನದ ಗರಿ, ಉಡುಪಿ ದ್ವಿತೀಯ, ಚಿಕ್ಕಮಗಳೂರು ತೃತೀಯ

Published:
Updated:
Prajavani

ಹಾಸನ: ರಾಜ್ಯ ಸರ್ಕಾರ 2011-12 ನೇ ಸಾಲಿನಲ್ಲಿ ಜಾರಿಗೆ ತಂದಿರುವ ಸಕಾಲ ಕಾಯ್ದೆಯು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.

ದೈನಂದಿನ ಪ್ರಗತಿಯಲ್ಲಿ ಮೇ 3 ರಂದು ಸಕಾಲ ಜಿಲ್ಲಾ ಶ್ರೇಯಾಂಕ ಮತ್ತು ಕಂದಾಯ ಇಲಾಖೆಯ ಶ್ರೇಯಾಂಕದಲ್ಲಿ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದೆ.

ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಮೊದಲ ವಾರದಲ್ಲಿ ಜಿಲ್ಲೆ ಒಟ್ಟಾರೆಯಾಗಿ ಮೊದಲ ಸ್ಥಾನ ಗಳಿಸಿದೆ.

ಜಿಲ್ಲೆಯಲ್ಲಿ 2019ರ ಸಾಲಿನಲ್ಲಿ ಈವರೆಗೆ ಒಟ್ಟು 2,26,507 ಅರ್ಜಿಗಳು ಸ್ವೀಕೃತವಾಗಿದ್ದು, 2,41,196 ಅರ್ಜಿಗಳು ವಿಲೇವಾರಿಯಾಗಿವೆ.

ಯೋಜನೆಯಲ್ಲಿ ಅರ್ಜಿಗಳ ಸ್ವೀಕಾರ ಕಾಲಮಿತಿಯೊಳಗೆ ವಿಲೇವಾರಿ ಮಾಡುವುದರ ಒಟ್ಟಾರೆಯಾಗಿ ಪರಿಗಣಿಸಿ ಜಿಲ್ಲೆಗೆ ಅಗ್ರ ಸ್ಥಾನ ನೀಡಲಾಗಿದೆ.

ಅರ್ಜಿ ಸಂಖ್ಯೆಗೆ ಸ್ವೀಕರಿಸುವ ಹಾಗೂ ವಿಲೇವಾರಿಗಳ ಪ್ರಮಾಣದ ಸರಾಸರಿಯಲ್ಲಿ ಜಿಲ್ಲೆಯ ಪ್ರದರ್ಶನ ಉತ್ತಮವಾಗಿದೆ.

ಉಡುಪಿ ಜಿಲ್ಲೆಯು ಅರ್ಜಿ ವಿಲೇವಾರಿಯಲ್ಲಿ ದ್ವಿತೀಯ ಸ್ಥಾನ, ಚಿಕ್ಕಮಗಳೂರು ಜಿಲ್ಲೆ ತೃತೀಯ, ಬೀದರ್ ಜಿಲ್ಲೆ 30 ನೇ ಸ್ಥಾನ ಗಳಿಸಿದೆ.

* ಸಕಾಲ ಸೇವೆಯಲ್ಲಿ ಒಟ್ಟಾರೆ ಪ್ರಥಮ ಸ್ಥಾನ ಪಡೆಯಲು ಕಾರಣರಾಗಿರುವ ಅಧಿಕಾರಿ, ಸಿಬ್ಬಂದಿಗೆ ಅಭಿನಂದನೆ. ಇದೇ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು.
-ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ; ತಾಲ್ಲೂಕುವಾರು; ಶ್ರೇಯಾಂಕ; ವಿವರ

ತಾಲ್ಲೂಕು; ಸ್ವೀಕೃತ ಅರ್ಜಿ; ವಿಲೇವಾರಿಯಾದ ಅರ್ಜಿ; ತಡವಾಗಿ ವಿಲೇವಾರಿ; ತಿರಸ್ಕೃತ ಅರ್ಜಿ

ಆಲೂರು;      9,466;  9,503;  952;  900

ಅರಕಲಗೂಡು; 27,371;  28,996;  2,780;  1890

ಅರಸೀಕೆರೆ;   36,825;  39,993;  2,820;  4,281

ಬೇಲೂರು;    25,351;  26,720;  2,085;  1,633

ಚನ್ನರಾಯಪಟ್ಟಣ; 36,889; 38,300; 1,051; 3,255

ಹಾಸನ;    52,591; 58,818; 2,015; 4757

ಹೊಳೆನರಸೀಪುರ;  23,303; 23,856; 784; 1351

ಸಕಲೇಶಪುರ;   14,711; 15,010; 1,923; 1191

ಒಟ್ಟು;   2,26507;  2,41196;  14,410;  19,258

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !