ರಾಜಕೀಯ ಕೊನೆಗಾಲದಲ್ಲಿ ಇದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರು ನಿರಾಶೆ ಆಗುವ ಅಗತ್ಯವಿಲ್ಲ. ಜನರ ಆಶೀರ್ವಾದ ಅವರ ಮೇಲೆ ಇಂದಿಗೂ ಇದೆ.
ಬಿ. ಶಿವರಾಂ ಮಾಜಿ ಸಚಿವ
ರೈತರಿಗೂ ಗುತ್ತಿಗೆ ನೀಡಲಿ
ಬಗರ್ ಕುಂ ಭೂ ಮಂಜೂರಾತಿಯಲ್ಲಿ ಸರ್ಕಾರ ನಿಯಮಗಳನ್ನು ಪರಿಷ್ಕರಣೆ ಮಾಡಬೇಕು. ಕಾಫಿ ಬೆಳೆಗಾರರಿಗೆ ಒತ್ತುವರಿ ಭೂಮಿಯನ್ನು 30 ವರ್ಷ ಗುತ್ತಿಗೆ ಆಧಾರದಲ್ಲಿ ನೀಡಿದ ಮಾದರಿಯಲ್ಲಿಯೇ ಸಣ್ಣಪುಟ್ಟ ರೈತರಿಗೆ ಎರಡೂವರೆ ಹೆಕ್ಟೇರ್‌ವರೆಗೂ ಭೂಮಿಯನ್ನು ಗುತ್ತಿಗೆ ನೀಡಬೇಕು. ಈ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯನ್ನು ಮತ್ತೆ ಒತ್ತಾಯಿಸುವುದಾಗಿ ಬಿ. ಶಿವರಾಂ ಹೇಳಿದರು.