ಕೃಷಿಕ ಬಂಧುಗಳಿಗೆ ಆಟದ ಸಂಭ್ರಮ

7
ರೈತರಿಗೆ ಗ್ರಾಮೀಣ ಕ್ರೀಡಾಕೂಟ; ಆಡುವವರಿಗೆ ಸಂಭ್ರಮ; ನೋಡುಗರಿಗೆ ರಂಜನೆ

ಕೃಷಿಕ ಬಂಧುಗಳಿಗೆ ಆಟದ ಸಂಭ್ರಮ

Published:
Updated:
Deccan Herald

ಹಾಸನ: ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಬಂಟರಹಳ್ಳಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಗ್ರಾಮೀಣ ಸೊಗಡಿನ ಹಗ್ಗ-ಜಗ್ಗಾಟ, ಕೆಸರುಗದ್ದೆ ಓಟ ಇನ್ನಿತರ ಸ್ಪರ್ಧೆಗಳು ನಡೆದವು.

ಕಾರೇಕೆರೆ ಕೃಷಿ ಮಹಾವಿದ್ಯಾಲಯ ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಝೆರ್ಸ್ ಆಶ್ರಯದಲ್ಲಿ ಸ್ಪರ್ಧೆ  ಆಯೋಜಿಸಿದ್ದು, ಮಹಿಳೆಯರು ಸೇರಿದಂತೆ ಕೃಷಿಕ ಕುಟುಂಬದ ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದರು.

ಬೇಸಾಯ ಚಟುವಟಿಕೆಗಳಲ್ಲಿ ವರ್ಷವಿಡೀ ತೊಡಗಿರುವ ರೈತರು, ಕುಟುಂಬ ಸದಸ್ಯರಿಗೆ ನಿತ್ಯದ ಚಟುವಟಿಕೆಗಳಿಗೆ ವಿರಾಮ ನೀಡಿ, ವಿವಿಧ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಗಮನ ಸೆಳೆದರು.

ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಯುವಕರು ಓಡುತ್ತಿದ್ದಂತೆ ಉಳಿದವರು ಕೇಕೆ, ಶಿಳ್ಳೆ, ಚಪ್ಪಾಳೆ ಮೂಲಕ ಉತ್ಸಾಹ ತುಂಬಿದರು. ಇನ್ನು ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆ ಎಲ್ಲರಿಗೂ ಒಳ್ಳೆಯ ಮನರಂಜನೆ ನೀಡಿತು. ಸ್ಪರ್ಧೆ ಆಡುವವರಿಗೆ, ನೋಡುವವರಿಗೆ ಖುಷಿ ತಂದಿತು.

ಜಿಲ್ಲಾ ವಾಲಿಬಾಲ್‌ ಅಸೋಸಿಯೇಷನ್ ಕಾರ್ಯದರ್ಶಿ ಉಮೇಶ್ ಅವರು ಗ್ರಾಮಕ್ಕೆ ಭೇಟಿ ನೀಡಿ ಶಿಬಿರಾರ್ಥಿಗಳು ನಡೆಸಿಕೊಡುತ್ತಿರುವ ಕೃಷಿ ಸಂಬಂಧಿತ ಕಾರ್ಯಕ್ರಮಗಳು ಹಾಗೂ ಅದರಿಂದ ರೈತರಿಗೆ ಆಗುತ್ತಿರುವ ಒಳಿತಿನ ಕುರಿತು ಹರ್ಷ ವ್ಯಕ್ತಪಡಿಸಿದರು.

ಬಂಟರಹಳ್ಳಿ, ಹಾಲೇನಹಳ್ಳಿ, ಮುತ್ತಿಗೆ, ಮುತ್ತಿಗೆಹಿರೇಹಳ್ಳಿ, ಹುಳುವಾರೆ ಮತ್ತು ಡಣನಾಯಕನಹಳ್ಳಿ ಗ್ರಾಮದ ಶಿಬಿರಾರ್ಥಿಗಳು, ಸಹ ಸಂಯೋಜಕರು, ಪ್ರಾಧ್ಯಾಪಕರು, ರೈತ ಹಾಗೂ ರೈತ ಮಹಿಳೆಯರು ಸೇರಿ 400ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಸ್ಪರ್ಧೆಯ ವಿಜೇತರಿಗೆ ಸುಫಲ ಯೂರಿಯಾ ಗೊಬ್ಬರದ ಚೀಲಗಳು, ಲಘು ಪೋಷಕಾಂಶಗಳ ದ್ರಾವಣ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಅನಿಲ್ ಕುಮಾರ್, ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಜರ್ಸ್‌ ಸಂಸ್ಥೆಯ ಸ್ಥಳೀಯ ವ್ಯವಸ್ಥಾಪಕ ಶ್ರೀಕಾಂತ್, ಬಂಟರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗಂಗಾಧರ್, ಕೃಷಿ ಮಹಾವಿದ್ಯಾಲಯದ ಡೀನ್ ಎನ್. ದೇವಕುಮಾರ್, ಗ್ರಾಮೀಣ ಕೃಷಿ ಕಾರ್ಯಾನುಭವದ ಸಂಯೋಜಕ ಆರ್.ವಿನಯ್ ಕುಮಾರ್, ಪ್ರಾಧ್ಯಾಪಕ ಜೈರಾಮಯ್ಯ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲೀಲಾವತಿ ಪುಟ್ಟರಾಜು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !