ಗುರುವಾರ , ಜುಲೈ 29, 2021
24 °C

ಗ್ರಾಮೀಣ ಭಾಷೆ ಅಪಾರ್ಥ ಮಾಡಿಕೊಂಡ ಸುಮಲತಾ: ಎಚ್‌.ಕೆ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಅಕ್ರಮ ಗಣಿಗಾರಿಕೆ ಹಾಗೂ ಕೆಆರ್‌ಎಸ್ ಬಿರುಕು ವಿಚಾರದಲ್ಲಿ ಸಂಸದೆ ಸುಮಲತಾ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ನೀಡುತ್ತಿರುವ ಹೇಳಿಕೆಗಳು ಮನರಂಜನೆಯಾಗಿ ಮಾರ್ಪಟ್ಟಿರುವುದು ಬೇಸರ ಮೂಡಿಸಿದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಹೇಳಿದರು.

ಕೆ.ಆರ್‌.ಎಸ್ ಬಿರುಕು ಬಿಟ್ಟಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಎಚ್‌.ಡಿ‌.ಕುಮಾರಸ್ವಾಮಿ ಹೇಳಿಕೆಯಲ್ಲಿ ಸಣ್ಣತನ, ಬೇರೆ ತರದ ಯಾವುದೇ ಉದ್ದೇಶ ಇಲ್ಲ. ಗ್ರಾಮೀಣ ಭಾಷೆಯನ್ನು ಸುಮಲತಾ ಅಪಾರ್ಥ ಮಾಡಿಕೊಂಡಿದ್ದಾರೆ. ಒಬ್ಬ ಪುರುಷ ಸಂಸದನಿಗೆ ಇದೇ ರೀತಿ ಹೇಳಿದ್ದರೆ ಆಗಲೂ ಈ ರೀತಿ ಅಪಾರ್ಥ ಕಲ್ಪಿಸುತ್ತಿದ್ರಾ? ಮಾಡಬೇಕಾಗಿರುವ ಅಭಿವೃದ್ಧಿ ಕೆಲಸಗಳು ನೂರಾರು ಇದೆ. ಅದರ ಕಡೆ ಗಮನ ನೀಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು