ಪ್ರಕೃತಿ ಸೌಂದರ್ಯಕ್ಕೆ ಮನಸೋತು ಹಾಸನದಲ್ಲಿ ನೆಲೆಸಿರುವ ಸಪ್ತಮಾತೃಕೆಯರು
ಸಂತೋಷ್ ಸಿ.ಬಿ.
Published : 24 ಅಕ್ಟೋಬರ್ 2024, 7:35 IST
Last Updated : 24 ಅಕ್ಟೋಬರ್ 2024, 7:35 IST
ಫಾಲೋ ಮಾಡಿ
Comments
ಈಗಿರುವ ಹಾಸನಾಂಬೆ ದೇವಸ್ಥಾನ
ಸೊಸೆ ಕಲ್ಲು
ದೇಗುಲದ ಗರ್ಭಗುಡಿಯಲ್ಲಿ ದೇವಿಯ ವಿಗ್ರಹದ ಎದುರು ಒಂದು ಪುಟ್ಟ ಕಲ್ಲಿದೆ. ಅದನ್ನು ಸೊಸೆ ಕಲ್ಲು ಎನ್ನುತ್ತಾರೆ. ಅದಕ್ಕೊಂದು ವಿಶೇಷ ಕಥೆಯಿದೆ. ನಿತ್ಯ ಸೊಸೆಗೆ ಕಿರುಕುಳ ನೀಡುತ್ತಿದ್ದ ಅತ್ತೆ ಒಂದು ದಿನ ಸೊಸೆಯನ್ನು ಹಿಂಬಾಲಿಸಿದಳು. ದೇವಿಯ ಧ್ಯಾನದಲ್ಲಿ ಮಗ್ನಳಾಗಿದ್ದ ಸೊಸೆಯನ್ನು ಕಂಡು ಸಿಟ್ಟಿನಿಂದ ‘ಮನೆಯ ಕೆಲಸಕ್ಕಿಂತ ದೇವಿ ದರ್ಶನ ನಿನಗೆ ಹೆಚ್ಚಾಯಿತೇ’ ಎಂದು ಪಕ್ಕದಲ್ಲಿದ್ದ ಚಂದ್ರಬಟ್ಟಲನ್ನು ತೆಗೆದುಕೊಂಡು ಸೊಸೆಯ ತಲೆಗೆ ಕುಕ್ಕಿದಳು. ಆ ನೋವನ್ನು ತಾಳಲಾರದೇ ಸೊಸೆಯು ‘ಅಮ್ಮಾ ಹಾಸನಾಂಬೆ ತಾಯೆ ಕಾಪಾಡು’ ಎಂದು ಭಕ್ತಿಯಿಂದ ಕೂಗಿದಳು. ಪ್ರತ್ಯಕ್ಷಳಾದ ದೇವಿಯು ‘ಯಾವಗಲೂ ನೀನು ನನ್ನ ಸನ್ನಿಧಾನದಲ್ಲೇ ನೆಲಸು’ ಎಂಬ ವರವನ್ನು ನೀಡಿದಳು. ಅದಿನಿಂದ ಸೊಸೆಯು ಅಲ್ಲಿಯೇ ಕಲ್ಲಾಗಿ ನೆಲೆಸಿದಳು. ಪ್ರತಿ ವರ್ಷವು ಒಂದು ಭತ್ತದ ಕಾಳಿನಷ್ಟೂ ದೇವಿಯ ವಿಗ್ರಹದ ಕಡೆ ಚಲಿಸುವಳೆಂದು ಹಾಗೂ ದೇವಿ ಪಾದ ತಲುಪಿದ ಕ್ಷಣವೇ ಕಲಿಯುಗ ಅಂತ್ಯ ಎನ್ನುವ ವಾಡಿಕೆಯಿದೆ. ಕಳ್ಳಪ್ಪನ ಗುಡಿ ದೇಗುಲಕ್ಕೆ ಆಭರಣಗಳನ್ನು ಕದಿಯಲು ಬಂದ ನಾಲ್ವರು ಕಳ್ಳರಿಗೆ ದೇವಿ ಶಾಪ ನೀಡಿದಾಗ ಅವರು ಕಲ್ಲಾದರು. ಈ ಗುಡಿಯನ್ನು ಕಳ್ಳಪ್ಪನ ಗುಡಿ ಎನ್ನುತ್ತಾರೆ. ಹಾಸನಾಂಬ ದೇವಿಯ ದೇವಾಲಯವನ್ನು ಪ್ರವೇಶಿಸಿದ ತಕ್ಷಣ ಕಾಣುವುದು ಸಿದ್ದೇಶ್ವರ ಸ್ವಾಮಿಯ ದೇಗುಲ. ಸಾಮಾನ್ಯವಾಗಿ ಶಿವನ ರೂಪವಾದ ಸಿದ್ದೇಶ್ವರ ಸ್ವಾಮಿಯು ಲಿಂಗರೂಪದಲ್ಲಿ ಇರುತ್ತದೆ. ಆದರೆ ಇಲ್ಲಿ ವಿನೂತನವಾದ ಉದ್ಭವಮೂರ್ತಿಯು ಅರ್ಜುನನಿಗೆ ಪಾಶುಪತಾಸ್ತ್ರ ನೀಡುತ್ತಿರುವ ಆಕಾರದಲ್ಲಿ ಒಡಮೂಡಿದೆ.