ಈ ಮೊದಲು ವಾಣಿವಿಲಾಸ ಸೇತುವೆಯನ್ನು ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸಲಾಗುತಿತ್ತು. ಈಗ ರಾಷ್ಟ್ರೀಯ ಹೆದ್ದಾರಿ 370 ಕ್ಕೆ ಸೇರಿದ ನಂತರ ಅವರೇ ನಿರ್ವಹಿಸಬೇಕು.
– ವಿನೂತನ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್
ವಾಣಿ ವಿಲಾಸ ಸೇತುವೆ ಅನುಪಯುಕ್ತ ಎಂದು ನಿರ್ಧರಿಸಿಲ್ಲ. ಅದನ್ನು ನಿರ್ವಹಿಸಬೇಕಾದದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜವಾಬ್ದಾರಿ. ಹಳೆಯ ಕಾಲದ ಸೇತುವೆಯ ರಕ್ಷಣೆ ಮಾಡುವುದು ಅಗತ್ಯ.
– ನರೇಂದ್ರ, ಸೇತುವೆಯನ್ನು ನಿರ್ವಹಣೆ ಮಾಡಿದ್ದ ಎಂಜಿನಿಯರ್
ನಾನು ಹುಟ್ಟಿದಾಗಿನಿಂದ ವಾಣಿವಿಲಾಸ ಸೇತುವೆ ಮೇಲೆ ಓಡಾಡುತ್ತಿದ್ದೇನೆ. ಈಗಲೂ ಅದೇ ಸೇತುವೆ ಮೇಲೆ ಓಡಾಡುತ್ತೇನೆ. ಈ ಸೇತುವೆ ಇನ್ನೂ ಗಟ್ಟಿಮುಟ್ಟಾಗಿದೆ. ಇದನ್ನು ನಿರ್ವಹಿಸಿ ಸಾರ್ವಜನಿಕರ ಬಳಕೆಗೆ ನೀಡಬೇಕು.