ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತೆ ಹೊಳೆಯಲ್ಲಿ ಮರಳು ದಂಧೆ: ಆರೋಪ

Last Updated 10 ಜನವರಿ 2012, 9:40 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನ ಯಸಳೂರು ಗ್ರಾ.ಪಂ. ವ್ಯಾಪ್ತಿಯ ಖ್ಯಾತೆ ಹೊಳೆ ಯಲ್ಲಿ ಅಕ್ರಮ ವಾಗಿ ಮರಳು ತೆಗೆಯ ಲಾಗುತ್ತಿದೆ ಎಂದು ಸಾಮ್ರಾಟ್ ಅಶೋಕ ಯುವ ವೇದಿಕೆ ಆರೋಪಿಸಿದೆ.

ರಾಜಕೀಯ ಮುಖವಾಡ ತೊಟ್ಟಿರುವ ಕೆಲ ಸ್ವಯಂಘೋಷಿತ ಮುಖಂಡರು ಅಕ್ರಮ ಮರಳು ದಂಧೆ ಯನ್ನು ಹಾಡು ಹಗಲೇ ರಾಜಾ ರೋಷ ವಾಗಿ ನಡೆಸುತ್ತಿದ್ದಾರೆ. ನದಿಗೆ ಜೆಸಿಬಿ ಯಂತ್ರವನ್ನು ಇಳಿಸಿ ಹರಿಯುವ ನೀರು ಬಗೆದು ಮರಳನ್ನು ತೆಗೆಯಲಾಗುತ್ತಿದೆ. ಈಗಾಗಲೇ ನದಿ ಉದ್ದಕ್ಕೂ ಸುಮಾರು 8ರಿಂದ 10 ಅಡಿ ಆಳದ ಹೊಂಡಗಳು ಬಿದ್ದು, ಜಾನುವಾರುಗಳಿಗೆ ಕುಡಿಯು ವುದಕ್ಕೆ, ಹೊಳೆಯ ಅಕ್ಕಪಕ್ಕದಲ್ಲಿ ಬೇಸಿಗೆ ಬೆಳೆ, ಹಸಿರು ಮೆಣಸಿನಕಾಯಿ ಬೆಳೆ ಬೆಳೆಯುವುದಕ್ಕೆ ಸಮಸ್ಯೆ ಉಂಟಾಗುತ್ತಿದೆ.

ಸರ್ಕಾರ ಮರಳು ನೀತಿ ಜಾರಿಗೆ ತಂದಿದ್ದು, ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದು ಅವರು ತೋರಿಸಿದ ಸ್ಥಳದಲ್ಲಿ ಅದರಲ್ಲೂ ಯಂತ್ರ ಬಳಸದೆ ಮರಳು ತೆಗೆಯಬೇಕು ಎಂಬ ಕಟ್ಟುನಿಟ್ಟಿನ ಕಾನೂನು ಇದ್ದರೂ, ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಗ್ರಾ.ಪಂ. ಸದಸ್ಯ ಹಾಗೂ ಯುವ ವೇದಿಕೆ ಅಧ್ಯಕ್ಷ ವೈ.ಜೆ.ದೇವೇಂದ್ರ ಆರೋಪಿಸಿದ್ದಾರೆ.

ಸರ್ಕಾರದ ಅಂಬೇಡ್ಕರ್, ಬಸವಾ ಇಂದಿರಾ ಅವಾಜ್, ಆಶ್ರಯ ಯೋಜನೆಗಳ ಫಲಾನುಭವಿಗಳಿಗೆ ಮರಳು ದೊರೆಯುತ್ತಿಲ್ಲ. ಟ್ರ್ಯಾಕ್ಟರ್ ಒಂದಕ್ಕೆ 2 ಸಾವಿರ ದುಬಾರಿ ಹಣ ನೀಡಿ ಮರಳು ಖರೀದಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹೊಳೆಯಿಂದ ಮರಳು ತೆಗೆಯು ತ್ತಿರುವ ಜಿಸಿಬಿ ಯಂತ್ರ, ಕೃಷಿ ಬಳಕೆಗಾಗಿ ಪಡೆದು, ಕಳ್ಳ ಸಾಗಣೆ ಮಾಡುವ ಟ್ರ್ಯಾಕ್ಟರ್‌ಗಳ ವಿಡಿಯೋ ಹಾಗೂ ಭಾವಚಿತ್ರ ಸಂಗ್ರಹಿಸಲಾಗಿದ್ದು, ಈ ಎಲ್ಲ ದಾಖಲೆ ಸಮೇತ ಜಿಲ್ಲಾಧಿಕಾರಿ, ಮುಖ್ಯ ಮಂತ್ರಿಗಳ ಕಚೇರಿ ಹಾಗೂ ಲೋಕಾ ಯುಕ್ತರಿಗೆ ದೂರು ನೀಡಲಾಗುವುದು. 

ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ದೂರು ನೀಡಿದರೂ ಕ್ರಮ ಕೈಗೊಳ್ಳದ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ವಿರುದ್ಧವೂ ಸಹ ದೂರು ನೀಡಲಾಗುವುದು.  ಕ್ರಮ ಕೈಗೊಳ್ಳದೆ ಇದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT