ಹೊಳೆನರಸೀಪುರ: ಜಮೀನಿಗೆ ನೀರು ಹಾಯಿಸಲು ತಾಲ್ಲೂಕಿನ ಮೂಲೆಕಾಳೇನಹಳ್ಳಿ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯೆಯೊಬ್ಬರ ಪತಿ ಗ್ರಾಮದೊಳಗಿನ ರಸ್ತೆ ಅಗೆದು ಅಕ್ರಮವಾಗಿ ಪೈಪ್ ಅಳವಡಿಸಿ ಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.ಗ್ರಾಮದ ಕೆಲವು ಮನೆಗಳವರು ದಶಕಗಳಿಂದ ಬಳಸುತ್ತಿದ್ದ ಅಗೆದು ಹಾಕಿದ್ದು ಅಲ್ಲಿದ್ದ ಮರಗಳನ್ನು ಕಡಿದು ದೌರ್ಜನ್ಯ ನಡೆಸಿದ್ದಾರೆ ಎಂದು ಗ್ರಾಮದ ಪಾರ್ವತಮ್ಮ, ಮಹೇಶ, ಬಸಮ್ಮಣ್ಣಿ, ಗೌರಮ್ಮ, ಮುತ್ತಮ್ಮ, ಸುರೇಶ, ಶಿಕ್ಷಕ ಮಲ್ಲೇಶ್, ಜಯಮ್ಮ, ನಂಜಮ್ಮ ಧರ್ಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಅಗೆದು, ಮರಗಳನ್ನು ಕಡೆದು ದೌರ್ಜನ್ಯ ನಡೆಸಿ ಅತಿಕ್ರಮ ಪ್ರವೇಶ ಮಾಡಿದ ಗ್ರಾಮ ಪಂಚಾಯ್ತಿ ಸದಸ್ಯೆ ಪತಿ ಪ್ರಕಾಶ, ಸತೀಶ, ರಘು ಅವರ ವಿರುದ್ಧ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಪ್ರಕರಣ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಕೈಮೀರಬಹುದು ಎಂದು ಗ್ರಾಮದ ಕೆಲ ಹಿರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.