ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಜಿಲ್ಲೆಯ 14,067 ವಿದ್ಯಾರ್ಥಿಗಳು ಪಾಸ್‌

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ: 1461 ರಿಪೀಟರ್ಸ್‌ಗೂ ‘ಉತ್ತೀರ್ಣ ಭಾಗ್ಯ’
Last Updated 20 ಜುಲೈ 2021, 14:46 IST
ಅಕ್ಷರ ಗಾತ್ರ

ಹಾವೇರಿ: ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದ ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ನಡೆಸದೇ ಪದವಿ ಪೂರ್ವ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಿಸಿದೆ. ಹೀಗಾಗಿ, ಜಿಲ್ಲೆಯ ಎಲ್ಲ 14,067 ಪಿಯು ವಿದ್ಯಾರ್ಥಿಗಳೂ ಉರ್ತೀರ್ಣರಾಗಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ12,606 ವಿದ್ಯಾರ್ಥಿಗಳು ಹಾಗೂ 1,461 ಪುನರಾವರ್ತಿತ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 6681 ಬಾಲಕರು ಮತ್ತು 7386 ಬಾಲಕಿಯರು ಸೇರಿದಂತೆ 4125 ಆಂಗ್ಲ ಮಾಧ್ಯಮ ಮತ್ತು 9942 ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ.

ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 6584, ವಾಣಿಜ್ಯ ವಿಭಾಗದಲ್ಲಿ 4632, ವಿಜ್ಞಾನ ವಿಭಾಗದಲ್ಲಿ 2851 ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶದ 8651 ಮತ್ತು ಗ್ರಾಮೀಣ ಪ್ರದೇಶದ 5416 ವಿದ್ಯಾರ್ಥಿಗಳಿಗೂ ಮುಂದಿನ ತರಗತಿಗೆ ಹೋಗುವ ಭಾಗ್ಯ ಸಿಕ್ಕಿದೆ.

ಎಸ್ಸೆಸ್ಸೆಲ್ಸಿಯ ಶೇ 45, ಪ್ರಥಮ ಪಿಯುಸಿಯ ಶೇ 45 ಮತ್ತು ದ್ವಿತೀಯ ಪಿಯುಸಿಯ ಶೇ 10ರಷ್ಟು ಶೈಕ್ಷಣಿಕ ಚಟುವಟಿಕೆ ಅಂಕಗಳನ್ನು ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ.

‘ಗ್ರೇಡಿಂಗ್‌ ಬದಲಾಗಿ ಅಂಕ ಆಧಾರಿತ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ನಮೂದಿಸಿ ಫಲಿತಾಂಶ ಪಡೆಯುತ್ತಿದ್ದಾರೆ. ಇಲಾಖೆಯಿಂದ ಕಾಲೇಜುಗಳ ಫಲಿತಾಂಶ ಮತ್ತು ಜಿಲ್ಲೆಯ ಒಟ್ಟಾರೆ ಫಲಿತಾಂಶದ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ಜುಲೈ 21ರಂದು ಬರುವ ನಿರೀಕ್ಷೆಯಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ ಎನ್‌.ಆರ್‌. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT