ರೇಣುಕಾ ಕೊಲೆ: ತನಿಖೆಗೆ 3 ತಂಡಗಳು

6

ರೇಣುಕಾ ಕೊಲೆ: ತನಿಖೆಗೆ 3 ತಂಡಗಳು

Published:
Updated:

ಹಾವೇರಿ:  ನಗರದ ಜಿ.ಎಚ್. ಕಾಲೇಜು ವಿದ್ಯಾರ್ಥಿನಿ ರೇಣುಕಾ ಬ. ಪಾಟೀಲ ಕೊಲೆ ಪ್ರಕರಣದ ತನಿಖೆಗೆ ಹಾವೇರಿ ಉಪವಿಭಾಗದ ಡಿವೈಎಸ್ಪಿ ಕುಮಾರಪ್ಪ, ಡಿಸಿಆರ್‌ಬಿ ಡಿವೈಎಸ್ಪಿ ನಾರಾಯಣ ಬರಮನಿ ಹಾಗೂ ಡಿಸಿಐಬಿ ಇನ್‌ಸ್ಪೆಕ್ಟರ್ ಸಂತೋಷ ಪಾಟೀಲ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದು, ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸುಳಿವುಗಳು ಲಭ್ಯವಾಗಿದ್ದು, ಶೀಘ್ರವೇ ಮಾಹಿತಿ ನೀಡುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

ರೇಣುಕಾ ಕೊಲೆಯು ಪರಿಚಿತರಿಂದಲೇ ನಡೆದಿರುವ ಬಗ್ಗೆ ಗುಮಾನಿ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಸುಳಿವು ಹಾಗೂ ಸಾಕ್ಷ್ಯಗಳ ಬೆನ್ನತ್ತಿದ್ದಾರೆ. ಆಕೆಯನ್ನು ಕರೆದೊಯ್ದಿದ್ದು, ಕೊಲೆ ಮಾಡಿ ಕುಣಿಮೆಳ್ಳಿಹಳ್ಳಿ ಸೇತುವೆ ಬಳಿ ಎಸೆದಿರುವ ಸಾಧ್ಯತೆಗಳ ಕುರಿತೂ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೇಣುಕಾ ಬ. ಪಾಟೀಲ ಶವವು ಇಲ್ಲಿಗೆ ಸಮೀಪದ ಕುಣಿಮೆಳ್ಳಿಹಳ್ಳಿಯಲ್ಲಿನ ವರದಾ ನದಿ ಸೇತುವೆ ಬಳಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !