ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ವಿಜೇತ ಸಿದ್ದು ಪೂಜಾರಗೆ ಸನ್ಮಾನ

Last Updated 9 ಜನವರಿ 2018, 9:07 IST
ಅಕ್ಷರ ಗಾತ್ರ

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ, ಮುನವಳ್ಳಿ ಗ್ರಾಮದಲ್ಲಿ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯ ಕೊನೆಯ ದಿನವಾದ ಸೋಮವಾರ ಕಲಬುರ್ಗಿ ಜಿಲ್ಲೆಯ ಅಳಂದಾದ ತಾಲ್ಲೂಕಿನ ಸಿದ್ದು ಪೂಜಾರ ಹಾಗೂ ಧಾರವಾಡದ ನಾಗಪ್ರಸಾದ ಉಡಚಮ್ಮನವರ ನಡುವೆ ಸ್ಪರ್ಧೆಯಲ್ಲಿ ಸಿದ್ದು ಪೂಜಾರ ಜಯಶಾಲಿಯಾದರು. ಅವರಿಗೆ ₹ 11 ಸಾವಿರ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಮೀರಜ್‌, ಮಂಗಳವಾಡಿ, ಆಳ್ನಾವರ, ದಾವಣಗೆರಿ, ಧಾರವಾಡ, ಗದಗ, ಕಾರವಾರ, ವಿಜಯಪುರ, ಇಂಡಿ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಯ ಕುಸ್ತಿಪಟುಗಳು ಭಾಗವಹಿಸಿದ್ದರು.

ವಿಜಯಪುರ ಜಿಲ್ಲೆಯ ಇಂಡಿಯ ಮಲ್ಲೇಶ ಲೋಣಿ, ಉತ್ತರ ಕನ್ನಡ ಜಿಲ್ಲೆಯ ರಾಜು ಮುಂಡಗೋಡ, ಹುಬ್ಬಳ್ಳಿಯ ಸಚೀನ್‌ ಉಣಕಲ್‌, ಹಾನಗಲ್‌ ತಾಲ್ಲೂಕಿನ ಲಿಂಗರಾಜ ಬೊಮ್ಮನಹಳ್ಳಿ ಹಾಗೂ ಸಿದ್ಧಲಿಂಗೇಶ ಯಳವಟ್ಟಿ, ರಾಣೆಬೆನ್ನೂರಿನ ಸಂತೋಷ, ಧಾರವಾಡದ ಮಾಲತೇಶ, ಬೆಳಗಾವಿಯ ರಮೇಶ ಪಾಟೀಲ ಹಾಗೂ ಕಾಶಿಂ, ಜಮಖಂಡಿಯ ಭರಮಪ್ಪ, ಲಿಂಗರಾಜ ಬಮ್ಮನಹಳ್ಳಿ ಪ್ರಮುಖ ಸ್ಪರ್ಧಾ ಪಟುಗಳು ವಿಜೇತರಾದರು. ಅವರಿಗೆ ಪ್ರಶಸ್ತಿ ಪತ್ರ, ಬಹುಮಾನ ನೀಡಿ ಗೌರವಿಸಲಾಯಿತು.

ಪಂದ್ಯವನ್ನು ನೋಡಲು ಸೇರಿದ್ದ ಜನಸಮೂಹ ಟ್ರ್ಯಾಕ್ಟರ್‌, ಚಕ್ಕಡಿಗಳನ್ನು ಮೈದಾನದ ಸುತ್ತಲು ನಿಲ್ಲಿಸಿ ವೀಕ್ಷಿಸಿದರು. ಸಿಳ್ಳೆ, ಚಪ್ಪಾಲೆ, ಕೇಕೆ ಹೊಡೆದು ಸ್ಪರ್ಧಿಗಳನ್ನು ಹುರಿದುಂಬಿಸುತ್ತಿದ್ದರು.

ಶಾಸಕ ಬಸವರಾಜ ಬೊಮ್ಮಾಯಿ, ಮುಖಂಡರಾದ ಗದಿಗೆಪ್ಪ ಕೂಲಿ, ನಾರಾಯಣಸಿಂಗ್‌ ಟೋಪಣ್ಣವರ, ನಾಗಪ್ಪ ಹಳವಳ್ಳಿ, ಸೋಮನಗೌಡ್ರ ಪಾಟೀಲ, ಬಾಪುಗೌಡ್ರ ಪಾಟೀಲ, ಸುರೇಶಪ್ಪ ಹಂಡೆ, ನಾರಾಯಣಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮೇಶ ಅಂಗಡಿ, ನಿಂಗನಗೌಡ ಪಾಟೀಲ, ಈರಪ್ಪ ನಾಗನೂರ, ಬಂಗಾರೆಪ್ಪ ಬಳ್ಳಾರಿ, ಎಫ್‌.ಸಿ.ಕಾಡಪ್ಪಗೌಡ್ರ, ಬಸವಣೆಪ್ಪ ಮಾರನಬೀಡ ಇದ್ದರು.

* * 

ಕುಸ್ತಿ ಭಾರತದ ಪ್ರಮುಖ ಆಟಗಳಲ್ಲಿ ಒಂದಾಗಿದ್ದು, ಕುಸ್ತಿ ಪಟುಗಳಿಗೆ ಪ್ರೋತ್ಸಾಹ ಸಿಗಬೇಕು. ಇದರಿಂದ ಹೆಚ್ಚಿನ ಸಾಧನೆ ಸಾಧ್ಯ
ಬಸವರಾಜ ಬೊಮ್ಮಾಯಿ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT