ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹೊಂಬಳಿ ಗ್ರಾಮದ ಬಳಿ ಧರ್ಮಾ ನದಿಯಲ್ಲಿ ಎಮ್ಮೆ ಮೈ ತೊಳೆಯಲು ಹೋದ ಯುವಕ ಭಾನುವಾರ ನೀರು ಪಾಲಾಗಿದ್ದಾನೆ.
ಯಮನಪ್ಪ ಬಂಡಿವಡ್ಡರ (24) ಮೃತಪಟ್ಟ ಯುವಕ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಧರ್ಮಾ ನದಿ ದಡದಲ್ಲಿ ಎಮ್ಮೆ ಮೈ ತೊಳೆಯಲು ಹೋದ ಸಂದರ್ಭ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.