ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಡಸ: ಮಕ್ಕಳಿಗೆ ವಿದ್ಯೆ ಜೊತೆಗೆ ಕೌಶಲ ಬೆಳೆಸಲು ಸಲಹೆ

Published 16 ಜೂನ್ 2024, 13:28 IST
Last Updated 16 ಜೂನ್ 2024, 13:28 IST
ಅಕ್ಷರ ಗಾತ್ರ

ತಡಸ: ಮಕ್ಕಳಿಗೆ ವಿದ್ಯೆ ಜೊತೆಗೆ ವಿವಿಧ ರೀತಿಯ ಕೌಶಲ ಹಾಗೂ ಹಿರಿಯರನ್ನು ಗೌರವಿಸುವ ಮಾನವೀಯ ಗುಣಗಳನ್ನು ಬೆಳೆಸುವ ಶಿಕ್ಷಣ ನೀಡಿ ಎಂದು ವೇದ ಮಾತಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಗೋವಿಂದ ಜೋಶಿ ಹೇಳಿದರು.

ಗ್ರಾಮದ ಗಾಯತ್ರಿ ತಪೋ ವನದ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಅಕ್ಷರಾಭ್ಯಾಸ ಹಾಗೂ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮಗಳ ಮೊರೆ ಹೋಗುತ್ತಿರುವ ಮಕ್ಕಳು ಪರಸ್ಪರ ಸಂಬಂಧಗಳನ್ನು ಅರಿಯದ ಸ್ಥಿತಿಗೆ ತಲುಪಿದ್ದಾರೆ. ಶಾಲೆಗಳು ಮಕ್ಕಳ ಸಮಗ್ರ ಜೀವನದ ಪಾಠಶಾಲೆಯಾಗಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ವಿನಾಯಕ ಕುಲಕರ್ಣಿ, ಸಮ ಸಮಾಜ ಹಾಗೂ ಪ್ರಗತಿಯ ಹಾದಿಯಲ್ಲಿ ಮಕ್ಕಳು ಬೆಳೆಯುವುದರ ಜೊತೆಗೆ ಉತ್ತಮ ಆರೋಗ್ಯ ಹೊಂದಿ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

ಗಾಯತ್ರಿ ತಪೋ ಭೂಮಿ ಚಾರಿಟೇಬಲ್ ಟ್ರಸ್ಟ್‌ನ ಪದಾಧಿಕಾರಿ ರಾಘವೇಂದ್ರ ಪಾಲನಕರ, ಸಾಮಾಜಿಕ ಪಿಡುಗುಗಳಿಂದ ಮಕ್ಕಳನ್ನು ದೂರವಿರಿಸಿ. ಸಮಗ್ರ ಸಮಾಜ, ಏಕತೆಯ ಭಾವನೆ ಬೆಳೆಸಬೇಕು ಹಾಗೂ ಅಧ್ಯಾತ್ಮದ ಪರಿಕಲ್ಪನೆ ಮಕ್ಕಳಲ್ಲಿ
ಬಾಲ್ಯದಿಂದಲೇ ಬೆಳೆಸುವ ಕಾರ್ಯವಾಗಬೇಕು ಎಂದರು.

ತಡಸ ಸಮೀಪದ ಗಾಯತ್ರಿ ತಪೋ ವನದ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಅಕ್ಷರಾಭ್ಯಾಸ ಹಾಗೂ ಸ್ವಾಗತ ಸಮಾರಂಭ ಜರುಗಿತು
ತಡಸ ಸಮೀಪದ ಗಾಯತ್ರಿ ತಪೋ ವನದ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಅಕ್ಷರಾಭ್ಯಾಸ ಹಾಗೂ ಸ್ವಾಗತ ಸಮಾರಂಭ ಜರುಗಿತು

ಶಾಲಾ ಆಡಳಿತ ಅಧಿಕಾರಿ ಮಂಜುನಾಥ್ ಎಸ್. ಹಿರೇಮಠ ಹಾಗೂ ಮುಖ್ಯ ಶಿಕ್ಷಕ, ಸಹ ಶಿಕ್ಷಕರು, ಪಾಲಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT