ಬ್ಯಾಡಗಿ: ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ಘಟಕದ ಆಶಾ ಕಾರ್ಯಕರ್ತೆಯರು ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ ಚಂದ್ರಶೇಖರ ನಾಯಕ ಅವರಿಗೆ ಮನವಿ ಸಲ್ಲಿಸಿದರು.

ಚನ್ನಮ್ಮ (ಸುಭಾಷ) ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಸ್ಟೇಶನ್ ರಸ್ತೆಯ ಮೂಲಕ ಹಾಯ್ದು ತಹಶೀಲ್ದಾರ್ ಕಚೇರಿ ಆವರಣ ತಲುಪಿತು.

ನೇತೃತ್ವ ವಹಿಸಿದ್ದ ಆಶಾ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಮಂಜುಳಾ ಮಾಸೂರ ಮಾತನಾಡಿ, ‘ನಾವು ಹಲವು ವರ್ಷಗಳಿಂದ ಅತ್ಯಂತ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದೇವೆ. ಅಧಿಕಾರಕ್ಕೆ ಬಂದ ಸರ್ಕಾರಗಳು ನಮಗೆ ಕನಿಷ್ಠ ವೇತನ ನೀಡದೇ ಅತ್ಯಂತ ಕೆಳಮಟ್ಟದಲ್ಲಿ ನೋಡುತ್ತಿರುವುದು ಖಂಡಿನೀಯ’ ಎಂದು ಹೇಳಿದರು.

‘ಇಂದಿನ ದುಬಾರಿ ಕಾಲದಲ್ಲಿ ಸರ್ಕಾರ ತಿಂಗಳಿಗೆ ₹ 5 ಸಾವಿರ ವೇತನ ನೀಡುತ್ತಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ, ಅಗತ್ಯ ವಸ್ತುಗಳ ಖರೀದಿ ಸೇರಿದಂತೆ ಜೀವನ ಸಾಗಿಸುವುದು ದುಸ್ತರವಾಗಿದೆ. ಕಾರಣ ನಮಗೂ ಕನಿಷ್ಠ ವೇತನ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಈ ಹಿಂದೆ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಕನಿಷ್ಠ ₹10 ಸಾವಿರ ವೇತನ ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೂ ಇದುವರೆಗೂ ಬೇಡಿಕೆ ಈಡೇರಿಲ್ಲ. ಕೂಡಲೇ ಆಶಾ ಕಾರ್ಯಕರ್ತೆಯರಿಗೂ ಕನಿಷ್ಠ ವೇತನ ನೀಡಲು ಸಂಪುಟದಲ್ಲಿ ತಿರ್ಮಾಣ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೇಖಾ ಕರಿಗಾರ, ನಿರ್ಮಲಾ ಕುರಕುಂದಿ, ಸರಸ್ವತಿ ಕಾಕೋಳ, ಚನ್ನಮ್ಮ ಗಿಡ್ಡಣ್ಣನವರ, ಪುಟ್ಟವ್ವ ಶೆಟ್ಟರ, ಸುಧಾ ಎಲಿ, ರೂಪಾ ಕೋಡಿಹಳ್ಳಿ, ಮಲ್ಲವ್ವ ವೀರಾಪುರ, ಲೀಲಾವತಿ ರಂಗಾರಿ, ಗೀತಾ ಹುಲ್ಲಕ್ಕನವರ, ಶೋಭಾ ಪಾಟೀಲ, ರೇಣುಕಾ ಧೂಳಿಕೊಪ್ಪ ಸೇರಿದಂತೆ ನೂರಾರು ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.