ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡಕ್ಕೆ ಮಣಿದು ಉಪ ಚುನಾವಣೆಯಲ್ಲಿ ಸ್ಪರ್ಧೆ: ಬನ್ನಿಕೋಡ ಮನದಾಳದ ಮಾತು

Last Updated 6 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಹಿರೇಕೆರೂರ: ಇಲ್ಲಿನ ರಾಘವೇಂದ್ರ ಕಾಲೊನಿಯಲ್ಲಿರುವ ಬಾಡಿಗೆ ಮನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ ಅವರು ಪುತ್ರ, ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರಕಾಶ ಬನ್ನಿಕೋಡ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸಾವಜ್ಜಿಯವರ ಜೊತೆಗೆ ಚರ್ಚಿಸುತ್ತಿರುವುದು ಶುಕ್ರವಾರ ಬೆಳಿಗ್ಗೆ ಕಂಡು ಬಂದಿತು.

ಆಗಾಗ ಬರುವ ಮೊಬೈಲ್ ಕರೆಗಳನ್ನು ಸ್ವೀಕರಿಸಿ ಕಾರ್ಯಕರ್ತರೊಂದಿಗೆ ಚುನಾವಣೆ ಮಾಹಿತಿ ಪಡೆಯುತ್ತಿದ್ದರು.

ಬಳಿಕ 'ಪ್ರಜಾವಾಣಿ' ಜೊತೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ, '2 ಬಾರಿ ಕ್ಷೇತ್ರದ ಶಾಸಕನಾಗಿ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದೇನೆ. ಸಕ್ರಿಯ ರಾಜಕೀಯ ಸಾಕು ಎನ್ನುವ ತೀರ್ಮಾನವನ್ನು ಕೈಗೊಂಡು 2018ರ ಚುನಾವಣೆಗೆ ಸ್ಪರ್ಧಿಸದೇ ಬಿ.ಸಿ.ಪಾಟೀಲ ಅವರಿಗೆ ಬೆಂಬಲಿಸಿದ್ದೆ. ಅವರು ಪಕ್ಷ ತೊರೆದು ಹೋದ ಮೇಲೆ ರಾಜ್ಯ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ಈ ಉಪ ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಆರಂಭದಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಬಗ್ಗೆ ತುಂಬಾ ಉತ್ತಮ ವಾತಾವರಣ ಇತ್ತು. ತಾಲ್ಲೂಕಿನ ಹಳ್ಳಿಗಳಲ್ಲಿ 2 ಬಾರಿ ಸುತ್ತಾಡಿದಾಗ ಅಚ್ಚರಿ ಎನ್ನುವಂತಹ ಜನಬೆಂಬಲ ಕಂಡು ಬಂದಿತ್ತು. ಕೊನೆಯ 2 ದಿನಗಳಲ್ಲಿ ಬಿಜೆಪಿಯವರು ನಡೆಸಿದ ಕಾರ್ಯಾಚರಣೆಯಿಂದ ಒಂದಿಷ್ಟು ಮತಗಳ ಗಳಿಕೆ ಕಡಿಮೆಯಾದರೂ ಗೆಲುವು ಖಂಡಿತ' ಎಂದು ತಿಳಿಸಿದರು.

'ರೈತ ಸಂಘಟನೆಯಿಂದ ತುಂಗಾ ಮೇಲ್ದಂಡೆ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸಿದ್ದ ನಾನು ರಾಜಕೀಯವನ್ನು ಸೇವೆ ಎಂದು ಪರಿಗಣಿಸಿದವನು. ನನಗೆ ಸೋಲು ಹೊಸದಲ್ಲ, ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಇದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT