ಶಿಗ್ಗಾವಿ: ಅಧಿಕಾರ ಅಂತಸ್ತು ಎಂದಿಗೂ ಶಾಶ್ವತವಲ್ಲ. ಅಧಿಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನ ಮರೆಯಲು ಸಾಧ್ಯವಿಲ್ಲ ಎಂದು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಭಾನುವಾರ ವಿರಕ್ತಮಠದ ಗುರುಲಿಂಗ ಮಹಾಸ್ವಾಮಿ ನೂತನ ಸಭಾಭವನ ಕಟ್ಟಡದ ಉದ್ಘಾಟನೆ ಅಂಗವಾಗಿ ನಡೆದ ಧರ್ಮ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೋಲು, ಗೆಲುವುಗಳನ್ನು ಸಮನಾಗಿ ಸ್ವೀಕರಿಸಿದಾಗ ಮಾತ್ರ ಭವಿಷ್ಯದಲ್ಲಿ ಜಯ ಗಳಿಸಲು ಸಾಧ್ಯವಿದೆ. ಆದರೆ ಜನರ ಪ್ರೀತಿ ವಿಶ್ವಾಸದ ಮುಂದೆ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಬಿಡುಗಡೆ ಮಾಡಿದ್ದ ಸುಮಾರು ₹35 ಕೋಟಿ ಅನುದಾನವನ್ನು ಇಂದಿನ ಸರ್ಕಾರ ತಡೆ ಹಿಡಿದಿದೆ. ಅದರಿಂದ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ರೈತರಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಬೇಕು. ಅದಕ್ಕಾಗಿ ಬೇಡ್ತಿ ಮತ್ತು ವರದಾ ನದಿಗಳ ಜೋಡಣೆಯಾಗಬೇಕು. ಸರ್ಕಾರದ ಪರಿಹಾರಕ್ಕಾಗಿ ರೈತರು ಕೈಚಾಚದಂತಾಗುತ್ತದೆ ಎಂದರು.

ಮಾಜಿ ಸಂಸದ ಎಂ.ಸಿ.ಕುನ್ನೂರ, ಶಿವಾನಂದ ಮ್ಯಾಗೇರಿ ಮಾತನಾಡಿದರು. ಹೊತ್ನಹಳ್ಳಿ ಸಿದ್ದಾರೂಢಮಠದ ಶಂಕರಾನಂದ ಸ್ವಾಮೀಜಿ ಸಮ್ಮುಖ ವಹಿಸಿದರು. ಬಸವಕೇಂದ್ರ ತಾಲ್ಲೂಕು ಅಧ್ಯಕ್ಷ ರವಿ ಬಂಕಾಪುರ ಅಧ್ಯಕ್ಷತೆ ವಹಿಸಿದ್ದರು.

ಮುಖಂಡರಾದ ನರಹರಿ ಕಟ್ಟಿ, ಉಮೇಶ ಅಂಗಡಿ, ಶಶಿಧರ ಹೊನ್ನಣ್ಣವರ, ಪ್ರೊ.ನಾಗರಾಜ ದ್ಯಾಮನಕೊಪ್ಪ, ಬಸವರಾಜ ಕುರಗೋಡಿ, ರಮೇಶ ಕಲಿವಾಳ, ಚನ್ನಮ್ಮ ಬಂಕಾಪುರ, ರೇಣುಕಾ ಬಂಕಾಪುರ, ಜ್ಯೋತಿ ಬಂಕಾಪುರ, ರೂಪಾ ಬಂಕಾಪುರ, ರಾಜೆಶ್ವರಿ ಬಂಕಾಪುರ, ಸುನಿತಾ ಬಂಕಾಪುರ, ದೀಪಾ ಬಂಕಾಪುರ, ರಾಜಣ್ಣ ಪಟ್ಟಣದ, ನಿಂಗಪ್ಪ ಚಿಗರಿ. ಸವಿತಾ ದಿಕ್ಷಿತ, ಪ್ರಮೀಳಾ ಮಸಳಿ, ಗೋವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಬಂಕಾಪುರ, ಸುಭಾಸ ಮಸಳಿ, ಜಗದೀಶ ಹುರಳಿ ಸೇರಿದಂತೆ ದೇವಸ್ಥಾನ ಸೇವಾ ಸಮಿತಿ ಸದಸ್ಯರು, ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.