ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಂದ್ರೆ ವಿಚಾರಧಾರೆ ಅನುಷ್ಠಾನ ಅವಶ್ಯ: ಸಾಹಿತಿ ಶೇಖರಗೌಡ ಪಾಟೀಲ

Published 26 ಅಕ್ಟೋಬರ್ 2023, 15:34 IST
Last Updated 26 ಅಕ್ಟೋಬರ್ 2023, 15:34 IST
ಅಕ್ಷರ ಗಾತ್ರ

ಹಂಸಭಾವಿ: ಇಲ್ಲಿನ ಹಾಲೇವಾಡಿಮಠದಲ್ಲಿ ಗುರುವಾರ ವರಕವಿ ದ.ರಾ.ಬೇಂದ್ರೆ ಅವರ 43ನೇ  ಪುಣ್ಯ ಸ್ಮರಣೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಶೇಖರಗೌಡ ಪಾಟೀಲ ಮಾತನಾಡಿ, ಇಂದು  ಯುವ ಜನರಲ್ಲಿ ಸಂಸ್ಕೃತಿ, ಸಂಸ್ಕಾರ, ಭಾಷೆ ಮತ್ತು ದೇಶ ಪ್ರೇಮದ ಅಭಿಮಾನ ಇಲ್ಲವಾಗಿದ್ದು, ಬೇಂದ್ರೆಯವರ ವಿಚಾರಧಾರೆಗಳ ಅನುಷ್ಠಾನ ಅವಶ್ಯವಾಗಬೇಕು’ ಎಂದರು.

ಡಾ.ಗಂಗಯ್ಯ ಕುಲಕರ್ಣಿ ಮಾತನಾಡಿ, ದ.ರಾ.ಬೇಂದ್ರೆಯವರು ಎಂದೆಂದಿಗೂ ಪ್ರಸ್ತುತ . ಬೇಂದ್ರೆಯವರ ಬರಹದಲ್ಲಿ,ನುಡಿಯಲ್ಲಿ ಹಾಗೂ ಅವರ ಜೀವನ ಶೈಲಿಯಲ್ಲಿ ಗ್ರಾಮೀಣ ಸೊಗಡಿನ ಜನಪದ ಸಂಪದವಿತ್ತು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಪ್ರಭುಸ್ವಾಮಿ ಹಾಲೇವಾಡಿಮಠ ಮಾತನಾಡಿದರು.

ಬಸವರಾಜ ಪೂಜಾರ, ಮೃತ್ಯುಂಜಯ ಉಜನಿಮಠ, ಜಿ.ಎನ್.ಮಡಿವಾಳರ, ಅನ್ನಪೂರ್ಣ ತಿರಕನಗೌಡ್ರು, ಜ್ಯೋತಿ ಹಾಲೇವಾಡಿಮಠ ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT