ಶುಕ್ರವಾರ, ಜೂಲೈ 3, 2020
21 °C

ಬೈಕ್ ಮುಖಾಮುಖಿ ಡಿಕ್ಕಿ; ಬೈಕ್ ಸವಾರರಿಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವಣೂರ: ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಿಂಬದಿಯಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಕಡಕೊಳ ಹಿರೇಮಳ್ಳಿಹಳ್ಳಿ ರಸ್ತೆ ಮಾರ್ಗ ಮಧ್ಯದಲ್ಲಿ ನಡೆದಿದೆ.

ಈಚಲಯಲ್ಲಾಪುರ ಗ್ರಾಮದ ಮಾಲತೇಶ ಫಕ್ಕೀರಪ್ಪ ಆಡಿನ (25), ಮತ್ತು ಮಂಜಪ್ಪ ಬಸವಂತಪ್ಪ ಓಲೇಕಾರ (27) ಮೃತಪಟ್ಟವರು.

ಈಚಲಯಲ್ಲಾಪುರ ಗ್ರಾಮದ ಮುತ್ತಪ್ಪ ಹನುಮಂತಪ್ಪ ಆಡಿನ, ಮತ್ತು ಹೊನ್ನವ್ವ ತಳವಾರ ಗಾಯಗೊಂಡವರು.

ಗಾಯಗೊಂಡ ಸವಾರರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು