ಬ್ಯಾಡಗಿ: ಪಟ್ಟಣದ ಚಂದ್ರಗುತ್ತೆಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ನೆರೆದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಹಾರಥೋತ್ಸವ ದೇವಸ್ಥಾನದ ಆವರಣದಿಂದ ಆರಂಭಗೊಂಡಿತು. ಬಳಿಕ ಹಂಸಭಾವಿ ರಸ್ತೆ, ಬನಶಂಕರಿ ರಸ್ತೆಯ ಮೂಲಕ ನೆಹರೂ ವೃತ್ತವನ್ನು ತಲುಪಿತು. ದಾರಿಯುದ್ದಕ್ಕೂ ನಂದಿಕೋಲು, ಡೊಳ್ಳು, ಬ್ಯಾಂಡ್ ಸೆಟ್ ಹಾಗೂ ಇನ್ನಿತರ ವಾದ್ಯ ವೈಭವದೊಂದಿಗೆ ಉದೋ..ಉದೋ.. ಎನ್ನುವ ವೇದಘೋಷಗಳ ನಡುವೆ ಸಂಭ್ರಮದಿಂದ ನೆರವೇರಿಸಲಾಯಿತು.

ಅಂದು ಬೆಳಿಗ್ಗೆ ದೇವಿಗೆ ಕುಂಕುಮಾರ್ಚನೆ, ವೀರಭದ್ರನಿಗೆ ರುದ್ರಾಭಿಷೇಕನೆರವೇರಿಸಿದ ಬಳಿಕ ಗುಗ್ಗಳ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಮಧ್ಯಾಹ್ನದ ಹೊತ್ತಿಗೆ ದೇವಸರ್ಥಾನದ ಆವರಣ ತಲುಪಿತು. ಈ ವೇಳೆ ಪುರವಂತರು ಒಡಪುಗಳನ್ನು ಪ್ರಸ್ತುತಪಡಿಸಿದರು. ಅಂತಿಮವಾಗಿ ಭಕ್ತರಿಂದ ಅಗ್ನಿ ಕುಂಡ ಪ್ರವೇಶ ನೆರವೇರಿಸಲಾಯಿತು.

ಫೆ.23ರಂದು ಸಂಜೆ ದೇವಿಯ ಮೆರವಣೆಗೆ ನೆಹರೂ ನಗರದಿಂದ ಆರಂಭಗೊಂಡು ಸ್ಟೇಶನ್ ರಸ್ತೆ, ವಾಲ್ಮೀಕಿ ನಗರ, ಹೊಂಡದ ಓಣಿ ಗಾಂಧಿ ನಗರದ ಮೂಲಕ ಸಾಗಿತು. ದಾರಿಯುದ್ದಕ್ಕೂ ಭಕ್ತರು ಹೂಮಾಲೆಗಲನ್ನು ಅರ್ಪಿಸುತ್ತಿರುವ ದೃಶ್ಯಗಳು ಕಂಡು ಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.