ಬುಧವಾರ, ಡಿಸೆಂಬರ್ 2, 2020
17 °C

ಕೆನರಾ ಬ್ಯಾಂಕ್ ಸಾಲ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಅತಿ ಕಡಿಮೆ ಬಡ್ಡಿದರದಲ್ಲಿ ಗ್ರಾಹಕರಿಗೆ ಗೃಹ ಸಾಲ, ವಾಹನ ಸಾಲ, ಶೈಕ್ಷಣಿಕೆ ಸಾಲ, ಬಂಗಾರ ಸಾಲ, ಕೃಷಿ ಸಾಲ ಮತ್ತು ಎಲ್ಲಾ ಅರ್ಹ ಗೃಹ ಸಾಲಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ₹2.67 ಲಕ್ಷ ರೂಪಾಯಿಗಳವರೆಗೆ ಸಹಾಯಧನ ಸೌಲಭ್ಯ ನೀಡಲಾಗುವುದು’ ಎಂದು ಕೆನರಾ ಬ್ಯಾಂಕ್‍ನ ರಿಟೇಲ್ ಅಸೆಟ್ ಹಬ್‍ನ ಪ್ರಾದೇಶಿಕ ಪ್ರಬಂಧಕ ಸಚಿನ್ ಹುಂದ್ರೆ ಹೇಳಿದರು.

ನಗರದ ಕೆನರಾ ಬ್ಯಾಂಕ್ ಶಾಖೆ ವತಿಯಿಂದ ಸೋಮವಾರ ‘ರಿಟೇಲ್ ಲೋನ್ ಉತ್ಸವ’ದಲ್ಲಿ ಅರ್ಹ ಫಲಾನುಭವಿಗಳಿಗೆ ಸಾಲ ಪತ್ರವನ್ನು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ಯಾಂಕಿನಲ್ಲಿ ರೈತರಿಗೂ ಗೃಹ ಸೌಲಭ್ಯ ನೀಡಲಾಗುವುದು, ಗ್ರಾಹಕರು ಬ್ಯಾಂಕಿನಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಹಾವೇರಿ ಶಾಖೆಯ ಪ್ರಬಂಧಕ ಗಣೇಶ ಗುಂಜಾಳರವರ, ಪ್ರಾದೇಶಿಕ ಕಚೇರಿಯ ಮಾರುಕಟ್ಟೆ ಪ್ರಬಂಧಕ ಸುರೇಶ ಕೆಂಚಿಯವರ, ನಾಗೇಂದ್ರ ತಿವಾರಿ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.