ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ: ರಾಷ್ಟ್ರಮಟ್ಟದ ಪ್ರೇರಣಾ ಉತ್ಸವಕ್ಕೆ ಚಂದನಾ ಆಯ್ಕೆ

Published 12 ಮೇ 2024, 14:12 IST
Last Updated 12 ಮೇ 2024, 14:12 IST
ಅಕ್ಷರ ಗಾತ್ರ

ಬ್ಯಾಡಗಿ: ತಾಲ್ಲೂಕಿನ ಮಾಸಣಗಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯ ಚಂದನಾ ಕೆಪ್ಪಲಿಂಗಣ್ಣನವರ ಗುಜರಾತ್‌ನ ವಡ್‌ನಗರದಲ್ಲಿ ಮೇ 13ರಿಂದ 17ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಪ್ರೇರಣಾ ಉತ್ಸವಕ್ಕೆ ಆಯ್ಕೆಯಾಗಿದ್ಧಾಳೆ.

ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಎಲ್ಲ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಚಂದನಾಳನ್ನು ಈಚೆಗೆ ಹಾನಗಲ್‌ ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗಿದೆ.

ಪ್ರೇರಣಾ ಉತ್ಸವಕ್ಕೆ ಆಯ್ಕೆಯಾಗಿರುವ ಚಂದನಾಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ, ಶಿಕ್ಷಣ ಸಂಯೋಜಕರಾದ ಬಸವರಾಜ ಸೋಮಕ್ಕಳವರ, ಎಂ.ಎಚ್. ಹಿರೇಮೊರಬ, ಮುಖ್ಯಶಿಕ್ಷಕ ಎಂ.ಡಿ.ಮೋಮಿನ್, ಸಿಬ್ಬಂದಿ ಎಸ್.ಬಿ.ಇಮ್ಮಡಿ, ಎ.ಬಿ.ತಳಮನಿ, ಎಂ.ಎಸ್.ಶಶಿಧರ, ಸುಭಾಸ್ ಕುರಕುಂದಿ, ಎಸ್.ಉಮಾದೇವಿ ಸನ್ಮಾನಿಸಿ ‌ಬೀಳ್ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT