ಅರಟಾಳ (ತಡಸ): ‘ಅಹಿಂಸೆ ಪರಮೋಧರ್ಮ ಎಂಬುವ ಜೈನ ಧರ್ಮದ ತತ್ವವನ್ನು ಪಾಲಿಸಿದ್ದರೆ, ಜಗತ್ತಿನಲ್ಲಿ ಹಿಂಸೆ ಎಂಬುವುದು ಇರುತ್ತಿರಲಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಶಿಗ್ಗಾವಿ ತಾಲ್ಲೂಕು ಅರಟಾಳ ಗ್ರಾಮದ ಶ್ರೀಕ್ಷೇತ್ರದಲ್ಲಿ ₹1.5 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳವಾರ ನೂತನ ಯಾತ್ರಿ ನಿವಾಸ ಕಟ್ಟಡ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಜೈನ ಧರ್ಮೀಯರು ತಾವು ದುಡಿಯುವ ಸಂಪತ್ತಿನ ಒಂದು ಭಾಗವನ್ನು ಧರ್ಮದ ಕಾರ್ಯಕ್ಕೆ ಮೀಸಲಿಡುತ್ತಾರೆ. ಮುಂದಿನ ಜನಾಂಗಕ್ಕೆ ಈ ಧರ್ಮದ ಪರಿಚಯವಾಗಬೇಕೆಂದು ಕ್ಷೇತ್ರದ ಎಲ್ಲ ಬಸದಿಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಬರುವ ಫೆಬ್ರವರಿ ತಿಂಗಳ ಒಳಗಾಗಿ ಕಟ್ಟಡವನ್ನು ಪೂರ್ಣಗೊಳಿಸಿ ಶ್ರೀಗಳಿಗೆ ಒಪ್ಪಿಸಲಾಗುತ್ತದೆ ಎಂದರು.
ಸಾನ್ನಿಧ್ಯವಹಿಸಿದ್ದ ಅಭಿಷ್ಠಾನ ಮುನಿಶ್ರೀ 108 ಪುಣ್ಯ ಸಾಗರ ಮಹಾರಾಜರು, ಹಿಂಸೆಯನ್ನು ಮಾಡುವುದು ಮಾನವ ಜನ್ಮದ ಅತಿ ದುರಂತದ ಕಾರ್ಯವಾಗಿದ್ದು, ಸಕಲ ಜೀವಿಗಳಿಗೂ ಬದುಕಲು ಮಾನವನ ಸಹಕಾರ ಮುಖ್ಯವಾಗಿದೆ. ಸುಂದರ ತಾಣವಾಗಿ ಅರಟಾಳ ಗ್ರಾಮವನ್ನಾಗಿ ಮಾಡುವುದರ ಜೊತೆಗೆ ಜೈನ ಸಮುದಾಯದ ಐತಿಹಾಸಿಕ ಬಿತ್ತರಿಸುವ ತಾಣವನ್ನು ಸಂರಕ್ಷಣೆ ಮಾಡುವ ಕಾರ್ಯ ನಾಡಿನ ಮುಖ್ಯಮಂತ್ರಿ ಮಾಡಿದ್ದಾರೆ ಎಂದರು.
ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಕುಮಾರ ಮಹಾಸ್ವಾಮಿ ಧುಂಡಶಿ, ವಾ.ಕ.ರ.ಸಾ. ಸಂಸ್ಥೆ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಜೈನ ಸಮುದಾಯದ ಹಿರಿಯ ಮುಖಂಡ ದತ್ತಾ ಡೋರ್ಲೆ, ತವನಪ್ಪ ಅಷ್ಟಗಿ, ಇರಣ್ಣ ಚೌಟಿ, ರವಿ ಪಾಸಾರಾ, ಗ್ರಾಮ ಪಂಚಾಯತ ಅಧ್ಯಕ್ಷ ಅಣ್ಣಪ್ಪ ಲಮಾಣಿ, ಅಜಿತ ಬಸಾಪುರ, ದೇವಣ್ಣ ಚಾಕಲಬ್ಬಿ, ಕಿರಣ ಅವರಾದಿ, ಮಹಾವೀರ ಕೊಳುರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.