ಶಿಗ್ಗಾವಿ: ಅನ್ಯಾಯದ ವಿರುದ್ಧ ಪ್ರಜಾಪ್ರಭುತ್ವದಡಿ ವಿರೋಧಿಸುವುದು ಅವಶ್ಯ. ಜನರ ಬೇಡಿಕೆಯ ಪರವಾಗಿ ಹೋರಾಟ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಜ. 26ರಂದು ನಡೆಯಲಿರುವ ಗಂಗಮ್ಮ ಎಸ್. ಬೊಮ್ಮಾಯಿ ಅವರ 92ನೇ ಜನ್ಮದಿನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ, ಸಂಘ ಸಂಸ್ಥೆಗಳಿಗೆ ಏರ್ಪಡಿಸಿದ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

’ತಾಲ್ಲೂಕಿನ ಭವಿಷ್ಯ ಹೇಗೆ ರೂಪಿಸಬೇಕು. ಯಾರು ರೂಪಿಸಬೇಕು ಎನ್ನುವುದನ್ನು ತಾಲ್ಲೂಕಿನ ಜನತೆ ತೀರ್ಮಾನ ಮಾಡುತ್ತಾರೆ. ಎಲ್ಲಿ ಅನ್ಯಾಯವಾಗುತ್ತದೆ ಅದನ್ನು ಸಮರ್ಥವಾಗಿ ಎದುರಿಸಬೇಕು. ನ್ಯಾಯದ ಪರವಾಗಿ ಹೋರಾಟ, ಸಂಘರ್ಷ ಮಾಡುವ ಅನಿವಾರ್ಯ. ಸಕಾರಾತ್ಮಕವಾಗಿ ಮಾಡುವ ಕೆಲಸ ಜನರಿಗೆ ರೇಷನ್ ಕಾರ್ಡ್ ಕೊಡುತ್ತಿಲ್ಲ. ಆಯುಷ್ ಮಾನ್ ಕಾರ್ಡ್ ಕೊಡುತ್ತಿಲ್ಲ. ಕಾಗದ ಪತ್ರ ದುಡ್ಡಿಲ್ಲದೇ ಸಿಗುತ್ತಿಲ್ಲ. ಎಲ್ಲ ಪ್ರಕರಣಗಳಲ್ಲಿ ಜನರ ಪರವಾಗಿ ನಿಂತು ಕೆಲಸ ಮಾಡಬೇಕಿದೆ. ಅವರ ಪರವಾಗಿ ಕೆಲಸ ಮಾಡೋಣ’ ಎಂದರು.

ಮತದಾರರ ಪಟ್ಟಿಯಲ್ಲಿನ ಲೋಪ, ದೋಷಗಳ ಬಗ್ಗೆ ತಿಳಿಯಬೇಕು. ಎಐಆರ್ ಆದಾಗ ಯಾವ ಯಾವ ವರ್ಷದಲ್ಲಿ ಎಷ್ಟೆಷ್ಟು ಮತಗಳು ನೈಜವಾಗಿ ಸೇರಿವೆ. ಯಾವಾಗ ಹೊರಗಡೆ ಮತಗಳು ಸೇರಿವೆ ಎನ್ನುವುದು ಎಸ್ಐಆರ್ ದಿಂದ ಗೊತ್ತಾಗುತ್ತದೆ. ರೈತ ವಿರೋಧಿ ಸರ್ಕಾರ ಎಂದು ತೋರಿಸಿದೆ. ಸಮಾಜ ಮತ್ತು ಸಂಸ್ಕೃತಿ ಪುನರ್ ಸ್ಥಾಪನೆ ಮಾಡಲು ನಾವು ಪದೇ ಪದೇ ತಾಯಿ ಬಗ್ಗೆ ಮಾತನಾಡುತ್ತೇವೆ. ಅಂದು ಹೆಲ್ತ್ ಕ್ಯಾಂಪ್ ಜೊತೆಗೆ ಎಸ್ಸಿ,ಎಸ್ಟಿ , ಒಬಿಸಿ ಸಮುದಾಯದಲ್ಲಿ ಪಿಯುಸಿ, ಎಸ್ಎಸ್ಎಲ್ಸಿ ಹೆಚ್ಚು ಅಂಕ ಪಡೆದವರಿಗೆ ಗೌರವಿಸುವ ಕೆಲಸ ಮಾಡಬೇಕು ಎಂದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಹರವಿ, ಶಿವಾನಂದ ಮ್ಯಾಗೇರಿ, ಗಂಗಣ್ಣ ಸಾತಣ್ಣವರ, ಶಿವ ಪ್ರಸಾದ ಸುರಗಿಮಠ, ಶಿವಾನಂದ ಸೂಬರದ, ದೇವಣ್ಣ ಚಾಕಲಾಬ್ಬಿ, ಶೋಭಾ ನಿಸಿಮಗೌಡ್ರ್, ಮಲ್ಲೇಶಪ್ಪ ಹರಿಜನ, ಎಂ. ಎನ್. ಹೊನ್ನೆಕೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.