ಬುಧವಾರ, ಫೆಬ್ರವರಿ 19, 2020
30 °C

ಹಲ್ಲೆ: ಅಪರಾಧಿಗಳಿಗೆ 5 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಸಹೋದರ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ನಡೆಸಿದ ಹಿರೇಕೆರೂರು ತಾಲ್ಲೂಕಿನ ಹೇಮಪ್ಪ ಬಿ.ಶೆಟ್ಟೆಪ್ಪ ಕೆಂಗಣ್ಣನವರ ಹಾಗೂ ವೀರೇಶ ಹೇಮಪ್ಪ ಕೆಂಗಣ್ಣನವರ ಎಂಬುವವರಿಗೆ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ನಾಯಾಧೀಶೆ ಕೆ.ಎಸ್‌. ಜ್ಯೋತಿಶ್ರೀ ಮಂಗಳವಾರ 5 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ ₹14 ಸಾವಿರ ದಂಡ ವಿಧಿಸಿದ್ದಾರೆ.

ಗಾಯಾಳುಗಳಾದ ಹೊನ್ನಪ್ಪ ಕೆಂಗಣ್ಣನವರ ಹಾಗೂ ಆತನ ಪತ್ನಿ ಹೇಮಾವತಿ ಅವರಿಗೆ ತಲಾ ₹30 ಸಾವಿರ ಹಣವನ್ನು ಪರಿಹಾರ ನೀಡುವಂತೆ ಆರೋಪಿತರಿಗೆ ಆದೇಶಿಸಿದ್ದಾರೆ.

ಹೇಮಪ್ಪ ಬಿ.ಶೆಟ್ಟೆಪ್ಪ ಕೆಂಗಣ್ಣವರ ಹಾಗೂ ಹೊನ್ನಪ್ಪ ಕೆಂಗಣ್ಣನವರ ಖಾಸ ಸಹೋದರರು. ಡಿ.12, 2014ರಂದು ಆರೋಪಿತರು ಆಸ್ತಿ ಸಂಬಂಧ ಜಗಳ ಮಾಡಿ ಕಬ್ಬಿಣದ ಸಲಾಕೆಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಜತೆಗೆ ಜೀವ ಬೆದರಿಕೆ ಹಾಕಿದ್ದರು ಎಂದು ಗಾಯಾಳು ಹೊನ್ನಪ್ಪ ಪೊಲಿಸ್‌ ಠಾಣೆಗೆ ದೂರು ಸಲ್ಲಿಸಿದ್ದರು. 

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸದಾನಂದ ಶಿರೂರ ಅವರು ವಾದ ಮಂಡಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)