ಮಕ್ಕಳು ಹಾಗೂ ಮಹಿಳೆಯರ ಸಮಸ್ಯೆಗೆ ತುರ್ತಾಗಿ ಸ್ಪಂದಿಸಲು ಜಿಲ್ಲೆಯಲ್ಲಿ ಅಕ್ಕಪಡೆ ಕೆಲಸ ಮಾಡುತ್ತಿದ್ದು ತಾಲ್ಲೂಕಿಗೂ ವಿಸ್ತರಿಸಲಾಗುವುದು. ಮಕ್ಕಳ ಸಮಸ್ಯೆಗಳಿದ್ದರೆ 1098 ಹಾಗೂ ಮಹಿಳೆಯರ ಸಮಸ್ಯೆಗೆ 112–181 ಸಂಖ್ಯೆಗೆ ಕರೆ ಮಾಡಬಹುದು
–ರೇವತಿ ಎಸ್. ಹೊಸಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ
ಜಿಲ್ಲೆಯಲ್ಲಿ ಪೋಕ್ಸೊ–ಬಾಲಗರ್ಭಿಣಿಯರ ಪ್ರಕರಣ ಅಧಿಕವಾಗಿವೆ. ಮಕ್ಕಳ ರಕ್ಷಣೆ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪೋಕ್ಸೊ–ಬಾಲಗರ್ಭಿಣಿಯರ ಮುಕ್ತ ಜಿಲ್ಲೆಯನ್ನಾಗಿಸಲು ಸಂಕಲ್ಪ ಮಾಡಬೇಕು
–ಶ್ರೀಶೈಲಜಾ ಎಚ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರು