ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್‌ ಸಾಮೂಹಿಕ ಅತ್ಯಾಚಾರ: ಆರೋಪಿಗಳ ಸಂಖ್ಯೆ 18ಕ್ಕೆ ಏರಿಕೆ

Published 25 ಜನವರಿ 2024, 15:58 IST
Last Updated 25 ಜನವರಿ 2024, 15:58 IST
ಅಕ್ಷರ ಗಾತ್ರ

ಹಾವೇರಿ: ಹಾನಗಲ್‌ ತಾಲ್ಲೂಕಿನ ನಾಲ್ಕರ ಕ್ರಾಸ್‌ ಸಮೀಪ ಜ.8ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಆರೋಪಿಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. 

ಅಕ್ಕಿಆಲೂರಿನ ಮೀನು ವ್ಯಾಪಾರಿಗಳಾದ ಇಸ್ಮಾಯಿಲ್‌ ಓಣಿಕೇರಿ (28), ಮೊಹಮ್ಮದ್‌ ಸಾದಿಕ್‌ ಕುಸನೂರು (25), ಮೊಬೈಲ್‌ ಮೆಕ್ಯಾನಿಕ್‌ ಆಸೀಫ್‌ಖಾನ್‌ (26) ಬಂಧಿತ ಆರೋಪಿಗಳು. 

‘ಅಪಘಾತದಲ್ಲಿ ಕಾಲಿನ ಮೂಳೆ ಮುರಿದುಕೊಂಡು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅಕ್ಕಿಆಲೂರಿನ ಆರೋಪಿ ಮೊಹಮ್ಮದ್‌ ಸೈಫ್‌ ಸಾವಿಕೇರಿ (19) ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ. ಈತನನ್ನೂ ಗುರುವಾರ ಬಂಧಿಸಿದ್ದೇವೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ್‌ ಸಿ. ತಿಳಿಸಿದ್ದಾರೆ. 

ಬಂಧಿತ ಇತರ ಆರೋಪಿಗಳು:

ಅಕ್ಕಿಆಲೂರಿನ ಗ್ಯಾರೇಜ್‌ ಕಾರ್ಮಿಕ ಅಫ್ತಾಬ್‌ ಚಂದನಕಟ್ಟಿ (24), ವ್ಯಾಪಾರಿ ಮಾದರಸಾಬ್‌ ಮಂಡಕ್ಕಿ (23), ಆಟೊ ಚಾಲಕ ಅಬ್ದುಲ್ ಖಾದರ್‌ ಜಾಫರಸಾಬ್‌ ಹಂಚಿನಮನಿ (28), ಹಾಲಿನ ವ್ಯಾಪಾರಿ ಇಮ್ರಾನ್‌ ಬಶೀರ್‌ ಅಹಮದ್‌ ಜೇಕಿನಕಟ್ಟಿ (23), ಗ್ಯಾರೇಜ್‌ ಕಾರ್ಮಿಕ ರೇಹಾನ್‌ ಮಹಮ್ಮದ್‌ ಹುಸೇನ್ ವಾಲೀಕಾರ (19), ಸಂತೆ ವ್ಯಾಪಾರಿ ಸಾದಿಕ್ ಬಾಬುಸಾಬ್ ಅಗಸಿಮನಿ (29), ಹೋಟೆಲ್ ಕಾರ್ಮಿಕ ಶೋಯೆಬ್ ನಿಯಾಜ್ ಅಹ್ಮದ್ ಮುಲ್ಲಾ (19), ಮಫೀದ್‌ ಓಣಿಕೇರಿ (23). ಅಕ್ಕಿಆಲೂರಿನ ಮೀನು ವ್ಯಾಪಾರಿ ಇಬ್ರಾಹಿಂ ಖಾದರ್‌ ಗೌಸ್‌ (27), ಕಾರು ಚಾಲಕ ತೌಸಿಫ್‌ ಅಹಮದ್‌ ಚೌಟಿ ಅಲಿಯಾಸ್‌ ಕಾಟ್ಲ (25), ಟೆಂಪೊ ಚಾಲಕ ಸಮಿವುಲ್ಲಾ ಲಾಲನವರ (24) ಮತ್ತು ತರಕಾರಿ ವ್ಯಾಪಾರಿ ಇಸ್ಮಾಯಿಲ್‌ ಹುಬ್ಬಳ್ಳಿ (27) ಅಕ್ಕಿಆಲೂರಿನ ರಿಯಾಜ್ ಸಾವಿಕೇರಿ (27) ಮತ್ತು ನಿಯಾಜ್ ದರ್ಗಾ (24) ಬಂಧಿತ ಆರೋಪಿಗಳು.

ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯಾದ ಆಟೊ ಚಾಲಕ ಅಬ್ದುಲ್‌ಖಾದರ್‌ ಹಂಚಿನಮನಿ ಜಾಮೀನು ಕೋರಿ ಹಾವೇರಿ ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT