ಹಾನಗಲ್: ‘ಸಾಮಾಜಿಕ ಬದ್ಧತೆ ಮತ್ತು ಲೋಕ ಕಲ್ಯಾಣಕ್ಕಾಗಿ ಶರಣ ಸಾಹಿತ್ಯ ಮೂಡಿ ಬಂದಿದೆ’ ಎಂದು ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸಿ.ಸೋಮಶೇಖರ ಹೇಳಿದರು.

ಇಲ್ಲಿನ ಶಂಕರಮಠ ಸಭಾಂಗಣದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ಶರಣ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಗಜ್ಯೋತಿ ಬಸವಣ್ಣ ನೀಡಿರುವ ನೈತಿಕ ಸಂವಿಧಾನವು ಜಗದ ಶಾಂತಿ, ಸಾಮರಸ್ಯಕ್ಕೆ ಸಹಕಾರಿ, ತಂದೆ– ತಾಯಿ ತೋರುವ ಆದರ್ಶವು ಮಕ್ಕಳಿಗೆ ಶ್ರೇಯಸ್ಸು ತರುತ್ತದೆ. ಶರಣರ ವಚನಗಳ ಸಾರ, ಸಂಗ್ರಹ ಪ್ರತಿ ಮನೆಯಲ್ಲಿ ಬೇಕು. ಇಂದಿನ ಮಕ್ಕಳು ಉತ್ತಮ ಪ್ರಜೆಗಳಾಗಿ ಬಾಳಲು ಶರಣ ಸಾಹಿತ್ಯ ಅಗತ್ಯ’ ಎಂದರು.

ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ಕನ್ನಡ ಸಾಹಿತ್ಯ ಲೋಕಕ್ಕೆ ಶರಣ ಸಾಹಿತ್ಯ ದೊಡ್ಡ ಕೊಡುಗೆಯಾಗಿದೆ. ಶರಣರ ವಚನಗಳು ಸಂಸ್ಕಾರಭರಿತ. ನಡೆ ನುಡಿಗಳು ಒಂದಾದಾಗ ಮಾತ್ರ ಶರಣರಾಗಲು ಸಾಧ್ಯವಿದೆ’ ಎಂದರು.

ಸಮ್ಮೇಳನ ಅಧ್ಯಕ್ಷೆ ನೀಲಮ್ಮ ಉದಾಸಿ ಮಾತನಾಡಿ, ‘ಹಾನಗಲ್ ಲಿಂ.ಕುಮಾರ ಶಿವಯೋಗಿಗಳು ಶರಣ ಸಾಹಿತ್ಯದ ರಕ್ಷಣೆಗೆ ಶ್ರಮಿಸಿದ್ದಾರೆ. ಎಲ್ಲ ಶರಣರ ಸಂದೇಶಗಳು ಮಾನವೀಯತೆಯ ನೆಲಗಟ್ಟಿನಲ್ಲಿವೆ’ ಎಂದರು.

ಅಕ್ಕಿಆಲೂರ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷ ರವಿಬಾಬು ಪೂಜಾರ ಆಶಯ ನುಡಿಗಳನ್ನಾಡಿದರು.

ಗೌರವಾಧ್ಯಕ್ಷ ಎಚ್.ಎಚ್.ರವಿಕುಮಾರ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪೂರ, ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ದ್ರಾಕ್ಷಾಯಿಣಿ ಗಾಣಿಗೇರ, ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ, ಉದ್ಯಮಿ ಸಿದ್ಧಲಿಂಗಪ್ಪ ಕಮಡೊಳ್ಳಿ, ಗಣ್ಯರಾದ ಕೊಟ್ರೇಶ ಬಿಜಾಪೂರ, ಸೋಮಶೇಖರ ಗಾಂಜಿ, ಗುರುನಾಥ ಗವಾಣಿಕರ, ಬಿ.ಶಿವಬಸವೇಶ್ವರ, ಸುಭಾಸ ಹೊಸಮನಿ, ನಿರಂಜನ ಗುಡಿ ಇದ್ದರು.

ಇದಕ್ಕೂ ಮುನ್ನ ಇಲ್ಲಿನ ತಾರಕೇಶ್ವರ ದೇವಸ್ಥಾನದಿಂದ ಶಂಕರಮಠದವರೆಗೆ ನಡೆದ ಸಮ್ಮೇಳನದ ಅಧ್ಯಕ್ಷರ ಸಾರೋಟ ಮೆರವಣಿಗೆಗೆ ಹಾನಗಲ್ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶೆ ಐಶ್ವರ್ಯ ಪಟ್ಟಣಶೆಟ್ಟಿ ಚಾಲನೆ ನೀಡಿದರು. ಶರಣರ ವೇಷಭೂಷಣ ತೊಟ್ಟ ಮಕ್ಕಳು ಮೆರವಣಿಗೆಯಲ್ಲಿ ಕಂಗೊಳಿಸಿದರು. ಮಹಿಳೆಯರು ಶರಣರ ಸಂದೇಶಗಳನ್ನು ಸಾರಿದರು. ಡೊಳ್ಳು ಮತ್ತು ಕಲಾ ಮೇಳಗಳು ಮೆರವಣಿಗೆಗೆ ಕಳೆ ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.