ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ಬದಲಾವಣೆ ರೈತರಿಗೆ ಸಮಸ್ಯೆ

ಹವಾಮಾನ ಬದಲಾವಣೆ ಮತ್ತು ಕೃಷಿ ಮೇಲೆ ಪರಿಣಾಮ ಕಾರ್ಯಾಗಾರ
Last Updated 27 ಫೆಬ್ರುವರಿ 2020, 15:50 IST
ಅಕ್ಷರ ಗಾತ್ರ

ಹಾವೇರಿ: ಪರಿಸರದಲ್ಲಿ ಇಂಗಾಲದ ಡೈ ಆಕ್ಸೈಡ್ಪ್ರಮಾಣ ಹೆಚ್ಚಾಗುತ್ತಿರುವುದು ಇಂದಿನ ಹವಾಮಾನ ಬದಲಾವಣೆಗೆ ಕಾರಣ ಎಂದು ಕೃಷಿ ಜಂಟಿ ನಿರ್ದೇಶಕ ಬಿ. ಮಂಜುನಾಥ ಹೇಳಿದರು.

ರಾಣೆಬೆನ್ನೂರು ತಾಲ್ಲೂಕು ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ‘ಹವಾಮಾನ ಬದಲಾವಣೆ ಮತ್ತು ಕೃಷಿ ಮೇಲೆ ಅದರ ಪರಿಣಾಮ’ ಕುರಿತು ಒಂದು ದಿನದ ಕಾರ್ಯಾಗಾರಉದ್ಘಾಟಿಸಿ ಅವರು ಮಾತನಾಡಿದರು.

ಹವಾಮಾನ ಬದಲಾವಣೆಯಿಂದಾಗಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೀಟಗಳು ಮತ್ತು ಅವುಗಳ ನೈಸರ್ಗಿಕ ಶತ್ರುಗಳನ್ನು ಅರ್ಥಮಾಡಿಕೊಳ್ಳುವುದು ಕೃಷಿ ಸಂಶೋಧನೆಯಲ್ಲಿ ಒಂದು ಪ್ರಮುಖ ಸವಾಲಾಗಿ ಬದಲಾಗಿದೆ ಎಂದರು.

ಬ್ಯಾಡಗಿ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ವಿಜಯಲಕ್ಷ್ಮಿ ಮಾತನಾಡಿ, ಅನಿಶ್ಚಿತ ಹವಾಮಾನ ಪರಿಸ್ಥಿತಿಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತು ಹವಾಮಾನ ಸ್ಥಿತಿಯ ಸಮಯೋಚಿತ ಮುನ್ಸೂಚನೆಗಾಗಿ ಮೊಬೈಲ್ ಆಪ್ಲಿಕೇಶನ್‍ಗಳ ಅಗತ್ಯತೆಯ ಕುರಿತು ತಿಳಿಸಿದರು.

ಬೇಸಾಯಶಾಸ್ತ್ರದ ಪ್ರಾಧ್ಯಾಪಕ ಡಾ.ಯು.ಕೆ.ಹುಲಿಹಳ್ಳಿ ಅವರು ಹವಾಮಾನ ಬದಲಾವಣೆಯು ಕೃಷಿ ಉತ್ಪಾದಕತೆಯ ಮೇಲೆ ಆಗುವ ಪರಿಣಾಮವನ್ನು ತಗ್ಗಿಸುವ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ನೀಡಿದರು.

ಧಾರವಾಡದ ಕೃ.ವಿ.ವಿ. ಹವಾಮಾನಶಾಸ್ತ್ರದ ಸಹ ಪ್ರಾಧ್ಯಾಪಕ ಡಾ. ಆರ್.ಎಚ್.ಪಾಟೀಲ ಅವರು ಹವಾಮಾನ ಬದಲಾವಣೆ ಮತ್ತು ಕೃಷಿಯ ಮೇಲೆ ಅದರ ಪ್ರಭಾವ, ಕೃಷಿ ವಿಜ್ಞಾನಿ ಡಾ. ಪ್ರವೀಣಕುಮಾರ ಗುಳೇದ ಭವಿಷ್ಯದ ತಾಪಮಾನವನ್ನು ಮತ್ತು ಸರಾಸರಿ ಸಮುದ್ರ ಮಟ್ಟದ ಕುರಿತು ಮಾತನಾಡಿದರು.

ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಆರ್.ಬಿ. ಬಸವರಾಜಪ್ಪ ಮಾತನಾಡಿ, ಪಶುಸಂಗೋಪನೆ ಮತ್ತು ಪ್ರಮುಖ ಕೃಷಿ ಪದ್ಧತಿಗಳಿಗೆ ಸಂಬಂಧಿಸಿದ ಇತರೆ ಉದ್ಯೋಗಗಳ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಾಗಾರದಲ್ಲಿ ವಿಜ್ಞಾನಿಗಳಾದ ಡಾ. ಜಿ. ಆರ್. ರಾಜಕುಮಾರ, ಡಾ. ಕೆ. ಪಿ. ಗುಂಡಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT