ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ ಟೂರ್ನಿ: ತುಮಕೂರು, ಬಾಗಲಕೋಟೆ ತಂಡ ಪ್ರಥಮ

Last Updated 16 ಡಿಸೆಂಬರ್ 2019, 15:15 IST
ಅಕ್ಷರ ಗಾತ್ರ

ಹಾವೇರಿ: ನ್ಯೂ ಇಂಡಿಯಾ ಫೆಡರೇಷನ್‌ ಆಫ್‌ ಇಂಡಿಯಾ, ಕರ್ನಾಟಕ ಕಬಡ್ಡಿ ಅಸೋಸಿಯೇಷನ್‌ ಹಾಗೂ ಜಿಲ್ಲಾ ಕಬಡ್ಡಿ ಅಸೋಸಿಯೇಷನ್‌ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯ ಜ್ಯೂನಿಯರ್‌ ಕಬಡ್ಡಿ ಟೂರ್ನಿಯಲ್ಲಿ ಬಾಲಕರ ವಿಭಾಗದಲ್ಲಿ ತುಮಕೂರು ಜಿಲ್ಲಾ ತಂಡ ಹಾಗೂ ಬಾಲಕಿಯರ ವಿಭಾಗದಲ್ಲಿ ಬಾಗಲಕೋಟೆ ತಂಡವು ಪ್ರಥಮ ಸ್ಥಾನ ಪಡೆದಿದೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯರಾತ್ರಿಯವರೆಗೆ ರೋಚಕ ಕಬಡ್ಡಿ ಪಂದ್ಯಾವಳಿಗಳು ನಡೆಯಿತು.

ರಾಜ್ಯದ 28 ಜಿಲ್ಲೆಗಳ ಬಾಲಕ ಮತ್ತು ಬಾಲಕಿಯರ ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. ಬಾಲಕರ ವಿಭಾಗದಲ್ಲಿ ತುಮಕೂರು ಹಾಗೂ ದಕ್ಷಿಣ ಕನ್ನಡ ತಂಡದವರುಫೈನಲ್‌ಗೆ ಪ್ರವೇಶಿಸಿತು. ಕ್ರಮವಾಗಿ ತಂಡಗಳು 49–44 ಅಂಕ ಪಡೆದು ತುಮಕೂರು ತಂಡ ಜಯಗಳಿಸಿತು.

ಬಾಲಕಿಯರ ವಿಭಾಗದಲ್ಲಿ ಬಾಗಲಕೋಟೆ ಹಾಗೂ ವಿಜಯಪುರ ತಂಡಫೈನಲ್‌ ಪ್ರವೇಶಿಸಿತು. ರೋಚಕ ಪಂದ್ಯಾವಳಿಯಲ್ಲಿ ಕ್ರಮವಾಗಿ 52–36 ಅಂಕ ಪಡೆದು ಬಾಗಲಕೋಟೆ ತಂಡ ಜಯಗಳಿಸಿತು.

ಬಾಲಕರ ವಿಭಾಗದಲ್ಲಿ ತುಮಕೂರು ತಂಡದ ಆಲ್‌ರೌಂಡರ್‌ ಆಟಗಾರನಾಗಿ ಹೇಮಂತ, ಉತ್ತಮ ದಾಳಿಗಾರನಾಗಿ ದಕ್ಷಿಣ ಕನ್ನಡತಂಡದ ಎಸ್‌.ರಾಜು, ಉತ್ತಮ ಹಿಡಿತಗಾರನಾಗಿ ಜಿಲ್ಸನ್‌ ಪ್ರಶಸ್ತಿ ಪಡೆದರು.

ಬಾಲಕಿಯರ ವಿಭಾಗದಲ್ಲಿ ಉತ್ತಮದಾಳಿಗಾರ್ತಿಯಾಗಿ ವಿಜಯಪುರ ತಂಡದ ಶ್ರೀದೇವಿ, ಆಲ್‌ರೌಂಡರ್‌ ಆಟಗಾರ್ತಿಯಾಗಿ ಬಾಗಲಕೋಟೆ ತಂಡದ ಲಕ್ಷ್ಮೀ ಹಾಗೂ ಉತ್ತಮ ಹಿಡಿತಗಾರ್ತಿಯಾಗಿ ಮಂಡ್ಯ ತಂಡದ ಸುಷ್ಮಾ ಪ್ರಶಸ್ತಿ ಪಡೆದರು.

ಇಲ್ಲಿ ಪ್ರಶಸ್ತಿ ಗಳಿಸಿದತಲಾ 12 ಬಾಲಕ ಮತ್ತು ಬಾಲಕಿಯರ ತಂಡ ಹರಿಯಾಣಾದ ಕುರುಕ್ಷೇತ್ರದಲ್ಲಿ ನಡೆಯುವ ರಾಷ್ಟ್ರಮಟ್ಟದ ಟೂರ್ನಿಗೆ ಪಾಲ್ಗೊಳ್ಳುವರು.

ಒಂದೇ ತಂಡದಲ್ಲಿ ಐವರು ಸಹೋದರಿಯರು:

ಬಾಲಕಿಯರ ವಿಭಾಗದ ಬಾಗಲಕೋಟೆ ಹಾಗೂ ವಿಜಯಪುರ ತಂಡದ ಗ್ರಾಮೀಣ ಭಾಗದ ಬಾಲಕಿಯರ ತಂಡ ಆಟ ಪ್ರೇಕ್ಷಕರಿಗೆ ಮನರಂಜನೆ ನೀಡಿತು. ಅಲ್ಲದೆ, ಬಾಗಲಕೋಟೆ ತಂಡದಲ್ಲಿ ಒಂದೇ ಮನೆತನದ ಐವರು ಸಹೋದರಿಯರು ಒಂದೇ ತಂಡದಲ್ಲಿ ಆಟವಾಡಿರುವುದು ವಿಶೇಷವಾಗಿತ್ತು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಶಾಸಕ ನೆಹರು ಓಲೇಕಾರ ಆಟಗಾರರಿಗೆ ಶುಭಕೋರಿದರು.ಅಂತರರಾಷ್ಟ್ರೀಯ ಕಬಡ್ಡಿ ತರಬೇತುದಾರ ಈಶ್ವರ ಅಂಗಡಿ, ಕಬಡ್ಡಿ ಅಸೋಸಿಯೇಷನ್‌ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶೆಟ್ಟರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT