ಶಿಗ್ಗಾವಿ: ತಾಲ್ಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ಮಂಗಳವಾರ ಮಹಾಶಿವರಾತ್ರಿ ಅಂಗವಾಗಿ ವೀರಭದ್ರ ಮಹಾಶಿವಯೋಗಿ ಸ್ವಾಮೀಜಿ ಅವರ ಮಹಾರಥೋತ್ಸವ ಅನೇಕ ಭಕ್ತರ ನಡುವೆ ಸಂಭ್ರಮದಿಂದ ಜರುಗಿತು.

ಮುರಘೇಂದ್ರ ಮಠದ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಝಾಂಜ್ ಮೇಳ, ಡೊಳ್ಳು, ಭಜನೆ, ಗೀತಗಾಯನ ಸೇರಿದಂತೆ ವಿವಿಧ ವಾಧ್ಯ ವೈಭವದೊಂದಿಗೆ 101 ಜೋಡೆತ್ತಿನ ಮೆರವಣಿಗೆ, ಕಳಸಾರೋಹಣ ರಥೋತ್ಸವಕ್ಕೆ ಮೆರುಗು ನೀಡಿದವು.

ದೇವಸ್ಥಾನದಲ್ಲಿ ವೀರಭದ್ರ ಮಹಾಶಿವಯೋಗಿ ಸ್ವಾಮೀಜಿ ಅವರ ಕತೃ ಗದ್ದುಗೆಗೆ ರುದ್ರಾಭಿಷೇಕ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ರಾತ್ರಿ ಹಿರೇಮಣಕಟ್ಟಿ ಕಲಾವಿದರಿಂದ ಸಂಗ್ಯಾ–ಬಾಳ್ಯಾ ಸಾಮಾಜಿಕ ನಾಟಕ ಪ್ರದರ್ಶಿಸಲಾಯಿತು. ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುಬ್ಬಳ್ಳಿ ನವನಗರದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಹಿರೇಬೆಂಡಿಗೇರಿ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಮಣಕಟ್ಟಿ ಸಿದ್ದಲಿಂಗಯ್ಯ ಶಾಸ್ತ್ರಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ವೀರಭದ್ರ ಮಹಾಶಿವಯೋಗಿ ಸ್ವಾಮೀಜಿ ಅವರ ಜಾತ್ರಾಮಹೋತ್ಸವದ ಅಂಗವಾಗಿ ಫೆ.19ರಿಂದ ಫೆ.21ರ ವರೆಗೆ ಕುಸ್ತಿ ಪಂದ್ಯಾವಳಿ ಜರುಗಲಿವೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.