ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ ಹುಣ್ಣಿಮೆ ಆಚರಣೆ: ಬಂಡಿ ಗಾಲಿ ಹೊಟ್ಟೆ‌‌ ಮೇಲೆ ಹರಿದು ವ್ಯಕ್ತಿ ಸಾವು

Published 28 ಜೂನ್ 2024, 5:42 IST
Last Updated 28 ಜೂನ್ 2024, 5:42 IST
ಅಕ್ಷರ ಗಾತ್ರ

ಹಾವೇರಿ: ಇಲ್ಲಿಯ ಕರ್ಜಗಿಯಲ್ಲಿ ಗುರುವಾರ ನಡೆದ ಕಾರ ಹುಣ್ಣಿಮೆ ಆಚರಣೆ ಸಂದರ್ಭದಲ್ಲಿ ಬಂಡಿಯ ಗಾಡಿಗಳು ಹೊಟ್ಟೆ ಮೇಲೆ‌ ಹರಿದು ತೀವ್ರ ಗಾಯಗೊಂಡು ಮಲ್ಲಪ್ಪ‌ ಕಳ್ಳಿಹಾಳ (34) ಮೃತಪಟ್ಟಿದ್ದಾರೆ.

ಕಾರ ಹುಣ್ಣಿಮೆ ನಿಮಿತ್ತ ಆಯೋಜಿಸಿದ್ದ ಬಂಡಿ ಓಟದ ವೇಳೆ ಚಕ್ರಕ್ಕೆ ಸಿಲುಕಿ ಮಲ್ಲಪ್ಪ ಮೃತಪಟ್ಟಿದ್ದಾರೆ.

ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಕಾರಹುಣ್ಣಿಮೆ ಹಬ್ಬ ನಡೆಯುತ್ತಿತ್ತು, ಹಬ್ಬದ ಕೊನೆಯ ದಿನವಾದ ಗುರುವಾರ ಕರಕ್ಕಿ ಬಂಡಿ ವೇಳೆ ವ್ಯಕ್ತಿಯ ಹೊಟ್ಟೆಯ ಮೇಲೆ ಬಂಡಿಯ ಚಕ್ರ ಹರಿದು ಈ ದುರ್ಘಟನೆ ನಡೆದಿದೆ.

ಕೂಡಲೇ ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದರೂ ಮಾರ್ಗ ಮಧ್ಯೆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಾವೇರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT