ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಗೊಂಡ: ದುರ್ಗಾದೇವಿ ಜಾತ್ರೆ ಇಂದಿನಿಂದ

Published : 2 ಫೆಬ್ರುವರಿ 2024, 4:39 IST
Last Updated : 2 ಫೆಬ್ರುವರಿ 2024, 4:39 IST
ಫಾಲೋ ಮಾಡಿ
Comments

ಬ್ಯಾಡಗಿ: ತಾಲ್ಲೂಕಿನ ಕೆಂಗೊಂಡ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ ಫೆ.2 ರಿಂದ ಫೆ.10ರವರೆಗೆ ನಡೆಯಲಿದೆ.  ಫೆ.2ರಂದು ದೇವಿಗೆ ಉಡಿ ತುಂಬುವ ಕಾರ್ಯ ನಡೆಯಲಿದೆ.

ಫೆ.6ರಂದು ದೇವಿಯ ಜಾತ್ರಾ ಮಹೋತ್ಸವ ಜರುಗಲಿದ್ದು, ಪರಸಿ ಕೂಡುವುದು ಹಣ್ಣು, ಕಾಯಿ ಅಲ್ಲದೆ ಕೋಳಿಯನ್ನು ಸಹ ಅರ್ಪಿಸಲಾಗುತ್ತದೆ. ದುರ್ಗಾದೇವಿಯ ಜಾತ್ರೆ ಸಂಜೆಯಿಂದ ಆರಂಭಗೊಂಡು ಅಹೋರಾತ್ರಿ ನಡೆಯಲಿದೆ. ಫೆ.8ರಂದು ದೇವಿಯ ಓಕಳಿ, ಫೆ.10ರಂದು ಭಕ್ತರು ನೀಡಿದ ಕಾಣಿಕೆಗಳ ಹರಾಜು ಪ್ರಕ್ರಿಯೆ ನಡೆಯಲಿದೆ.

ಬಂಜಾರ (ಲಂಬಾಣಿ) ಸಮಾಜದ ಆರಾಧ್ಯ ದೇವತೆ ದುರ್ಗಾದೇವಿಗೆ ನಾಡಿನಾದ್ಯಂತ ಅಪಾರ ಭಕ್ತರ ಸಮೂಹವಿದೆ. ಜಾತ್ರೆ ನಡೆಯುವ ದಿನದಂದು ನಾಡಿನ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಹರಕೆಯನ್ನು ತೀರಿಸುವ ಪದ್ಧತಿ ಇಂದಿಗೂ ಮುಂದುವರೆದುಕೊಂಡು ಬಂದಿದೆ.

ಪ್ರತಿ ಅಮಾವಾಸ್ಯೆಯಂದು ದೇವಿಯ ದರ್ಶನ ಪಡೆಯಲು ಅಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತದೆ. ಕೆಮ್ಮು ನಿವಾರಣೆಗಾಗಿ ದೇವಸ್ಥಾನದ ಆವರಣದಲ್ಲಿರುವ ಕೆಮ್ಮಮ್ಮ ದೇವಿ ದೇವಸ್ಥಾನಕ್ಕೆ ಉಪ್ಪು, ಮೆಣಸಿನಕಾಯಿ ಹಾಗೂ ಹುಣಸೆ ಹಣ್ಣಿನ ಹರಕೆ ತೀರಿಸಲಾಗುತ್ತದೆ.

ದೇವಿಯ ಹರಕೆಯಿಂದ ಸಂತಾನ ಭಾಗ್ಯ ಪಡೆದವರು ಮಗುವಿನ ತೂಕದಷ್ಟು ಬೆಲ್ಲ ಹಾಗೂ ತೆಂಗಿನ ಕಾಯಿಗಳನ್ನು ದುರ್ಗಾದೇವಿಗೆ ಸಮರ್ಪಿಸುತ್ತಾರೆ.  ಜಾತ್ರೆ ನಡೆದ ವೇಳೆ ದೇವಸ್ಥಾನದಲ್ಲಿ ಒಂದು ಕಾಯಂ ತಕ್ಕಡಿಯನ್ನು ನೇತು ಹಾಕಲಾಗಿದೆ. ಕಳೆದ ಮೂರು ವರ್ಷಗಳಿಂದ ದೇವಸ್ಥಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಚಾಲಕ್ಯ ಶೈಲಿಯಲ್ಲಿ ನಿರ್ಮಿತವಾಗಿರುವ ಕಲ್ಮೇಶ್ವರ ದೇವಾಲಯ ಮುಖ್ಯ ಆಕರ್ಷಣೆಯಾಗಿದೆ. ಕೆಂಗೊಂಡ ಗ್ರಾಮದಲ್ಲಿ ದುರ್ಗಮ್ಮ, ಬಸವಣ್ಣ, ಹನುಮಂತ, ದ್ಯಾಮವ್ವ, ಚೌಡವ್ವ ಉಡಚವ್ವ, ಮಾಯವ್ವ, ಕೆಮ್ಮವ್ವ ದೇವರ ದೇವಸ್ಥಾನಗಳಿವೆ.

ಸಾರಿಗೆ ಸಂಪರ್ಕ: ಮೋಟೆಬೆನ್ನೂರ ಬಳಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 48ರಿಂದ 8 ಕಿ.ಮೀ ಅಂತರದದಲ್ಲಿರುವ ಕೆಂಗೊಂಡ ಗ್ರಾಮಕ್ಕೆ ಉತ್ತಮ ಸಾರಿಗೆ ಸಂಪರ್ಕವಿದೆ. ಹೊಸರಿತ್ತಿ, ಗುತ್ತಲ, ಕನವಳ್ಳಿ ಕಡೆಗೆ ಹೋಗುವ ಸಾರಿಗೆ ಸಂಸ್ಥೆಯ ಬಸ್‌ಗಳು ಕೆಂಗೊಂಡ ಗ್ರಾಮದ ಮೂಲಕ ಸಂಚರಿಸುತ್ತವೆ. ಸರಳ ವಿವಾಹ ಏರ್ಪಡಿಸಲು ಉತ್ತಮ ಸ್ಥಳವಾಗಿದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ ಮಾಹಿತಿ ನೀಡಿದರು.

ಬ್ಯಾಡಗಿ ತಾಲ್ಲೂಕಿನ ಕೆಂಗೊಂಡ ಗ್ರಾಮದ ದುರ್ಗಾದೇವಿ
ಬ್ಯಾಡಗಿ ತಾಲ್ಲೂಕಿನ ಕೆಂಗೊಂಡ ಗ್ರಾಮದ ದುರ್ಗಾದೇವಿ

6ರಂದು ದೇವಿಯ ಜಾತ್ರೆ ಸಂಭ್ರಮ 10ರಂದು ಕಾಣಿಕೆಗಳ ಹರಾಜು ಪ್ರಕ್ರಿಯೆ ಕೆಮ್ಮು ನಿವಾರಣೆಗೆ ದೇವಿಗೆ ವಿಶೇಷ ಪೂಜೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT