ಹಾವೇರಿ: ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ 12 ಮಂದಿಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಮಂಗಳವಾರ ಯಾವುದೇ ಹೊಸ ಕೋವಿಡ್ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ.

ಈವರೆಗೆ 308 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಗುಣಮುಖರಾಗಿ ಆಸ್ಪತ್ರೆಯಿಂದ ಒಟ್ಟು 182 ಮಂದಿ ಬಿಡುಗಡೆಯಾಗಿದ್ದಾರೆ. 119 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿನಿಂದ ಏಳು ಮಂದಿ ಮೃತಪಟ್ಟಿದ್ದಾರೆ. ಒಬ್ಬರು ಐ.ಸಿ.ಯು.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಣೆಬೆನ್ನೂರ ತಾಲ್ಲೂಕಿನ ಐವರು, ಹಿರೇಕೆರೂರು ತಾಲ್ಲೂಕಿನ ಮೂವರು, ಹಾನಗಲ್ ತಾಲ್ಲೂಕಿನ ಇಬ್ಬರು, ಹಾವೇರಿ ಹಾಗೂ ಬ್ಯಾಡಗಿಯ ತಲಾ ಒಬ್ಬರು ಬಿಡುಗಡೆಯಾಗಿದ್ದಾರೆ. ಈವರೆಗೆ ಗುಣಮುಖರಾಗಿ ಬಿಡುಗಡೆಯಾದ 182 ಜನರ ಪೈಕಿ ಸವಣೂರ ತಾಲ್ಲೂಕಿನ 18, ಶಿಗ್ಗಾವಿಯ 61, ರಾಣೆಬೆನ್ನೂರಿನ 19, ಹಾವೇರಿಯ 14, ಬ್ಯಾಡಗಿಯ ಇಬ್ಬರು, ಹಾನಗಲ್ನ 30 ಮಂದಿ ಹಾಗೂ ಹಿರೇಕೆರೂರು ತಾಲ್ಲೂಕಿನ 38 ಮಂದಿ ಒಳಗೊಂಡಿದ್ದಾರೆ.

119 ಸಕ್ರಿಯ ಪ್ರಕರಣಗಳ ಪೈಕಿ ಸವಣೂರ ತಾಲ್ಲೂಕಿನ 10, ಶಿಗ್ಗಾವಿ ತಾಲ್ಲೂಕಿನ 21, ರಾಣೇಬೆನ್ನೂರು ತಾಲ್ಲೂಕಿನ 11, ಹಾವೇರಿತಾಲ್ಲೂಕಿನ 49, ಬ್ಯಾಡಗಿ ತಾಲ್ಲೂಕಿನ 7, ಹಾನಗಲ್ತಾಲ್ಲೂಕಿನ 12, ಹಿರೇಕೆರೂರುತಾಲ್ಲೂಕಿನ 9 ಪ್ರಕರಣಗಳು ಒಳಗೊಂಡಿವೆ. ಈವರೆಗೆ ಸವಣೂರ –1, ಶಿಗ್ಗಾವಿ–3 , ರಾಣೆಬೆನ್ನೂರು–1 ಹಾಗೂ ಹಾವೇರಿ ತಾಲ್ಲೂಕಿನ–2 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಭೇಟಿ:ಹಾವೇರಿ ತಾಲ್ಲೂಕು ಬಸಾಪುರದ ಕಿತ್ತೂರ ರಾಣಿಚನ್ನಮ್ಮ ವಸತಿ ಶಾಲೆಯಲ್ಲಿ ಆರಂಭಿಸಲಾದ ಕೋವಿಡ್ ಕೇರ್ ಸೆಂಟರ್ಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಭೇಟಿ ನೀಡಿ ಮೂಲಸೌಕರ್ಯಗಳ ಸಿದ್ಧತೆ ಕುರಿತಂತೆ ಪರಿಶೀಲನೆ ನಡೆಸಿದರು.

ಮಂಗಳವಾರ ಬೆಳಿಗ್ಗೆ ಬಸಾಪುರ ಗ್ರಾಮದಲ್ಲಿರುವ ಕಿತ್ತೂರರಾಣಿ ಚನ್ನಮ್ಮ ಶಾಲೆಗೆ ಭೇಟಿ ವಸತಿ ಶಾಲೆಯಲ್ಲಿ 100 ಹಾಸಿಗೆ ಸೌಲಭ್ಯಗಳ ಕುರಿತಂತೆ ಪರಿಶೀಲನೆ ನಡೆಸಿದರು. ಮಂಚ, ಹಾಸಿಗೆ, ಪರದೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.