ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರೇಕೆರೂರು | ಸೌಕರ್ಯ ವಂಚಿತ ತಾಲ್ಲೂಕು ಕಚೇರಿ; ಕುಡಿಯುವ ನೀರು, ಶೌಚಾಲಯ ಕೊರತೆ

Published : 23 ಸೆಪ್ಟೆಂಬರ್ 2024, 4:54 IST
Last Updated : 23 ಸೆಪ್ಟೆಂಬರ್ 2024, 4:54 IST
ಫಾಲೋ ಮಾಡಿ
Comments

ಹಿರೇಕೆರೂರು: ಹಲವು ಅಹವಾಲು ಹೊತ್ತು ನೂರಾರು ಜನರು ಭೇಟಿ ನೀಡುವ ಇಲ್ಲಿನ ತಹಶೀಲ್ದಾರ್ ಕಚೇರಿ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.

ಕಚೇರಿಯಲ್ಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಇದೆ. ಸಿಬ್ಬಂದಿಗಾಗಿ ಇಟ್ಟಿರುವ ಶುದ್ಧ ಕುಡಿಯುವ ನೀರಿನ ಯಂತ್ರ ಕೆಟ್ಟು ಹಲವು ತಿಂಗಳು ಕಳೆದರೂ ದುರಸ್ತಿ ಕೆಲಸ ಆಗಿಲ್ಲ. ನೀರಿಗಾಗಿ ಕ್ಯಾಂಟೀನ್ ಹಾಗೂ ಡಬ್ಬಾ ಅಂಗಡಿಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ.

ಕಚೇರಿ ಆವರಣದಲ್ಲಿ ಶೌಚಾಲಯ ನಿರ್ಮಿಸಿಲ್ಲ. ಕಂದಾಯ, ಆಹಾರ, ಉಪನೋಂದಣಿ ಕಚೇರಿ, ಸರ್ವೆ, ಖಜಾನೆ ಸೇರಿದಂತೆ ಹಲವು ಇಲಾಖೆಗಳು ಇಲ್ಲಿದ್ದರೂ, ಸೌಲಭ್ಯವನ್ನೂ ಕಲ್ಪಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸಿಬ್ಬಂದಿ ಹಾಗೂ ಜನರು ಎಲೆ, ಅಡಿಕೆ ತಿಂದು ಉಗುಳಿದ ಕಲೆಗಳು ತುಂಬಿಕೊಂಡಿದೆ. ಕಾರ್ಯಾಲಯದ ಮುಂದೆ ಸಾಕಷ್ಟು ಸ್ಥಳಾವಕಾಶ ಇದ್ದರೂ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.  

‘ತಾಲ್ಲೂಕು ಕಚೇರಿಯಲ್ಲೇ ಮೂಲ ಸೌಕರ್ಯಗಳು ಇಲ್ಲದಿರುವುದು ಆಡಳಿತಕ್ಕೆ ಹಿಡಿದ ಕೈ ಕನ್ನಡಿಯಾಗಿದೆ. ತಾಲ್ಲೂಕಿನ 60ಕ್ಕೂ ಹೆಚ್ಚು ಹಳ್ಳಿಗಳು ಜನರು ವಿವಿಧ ಕೆಲಸಗಳಿಗಾಗಿ ಕಚೇರಿಗೆ ಬರುತ್ತಾರೆ. ಅಧಿಕಾರಿಗಳು ಶೀಘ್ರ ಕ್ರಮ ವಹಿಸಬೇಕು’ ಎಂದು ರೈತ ಮುಖಂಡ ರಾಮಣ್ಣ ಕೆಂಚಳ್ಳೇರ ಹೇಳಿದರು.

ಸರ್ವಜ್ಞ ಸಭಾಭವನದ ಮುಂದಿನ ಸಾರ್ವಜನಿಕ ಶೌಚಾಲಯವನ್ನೇ ಬಳಸಲಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ವ್ಯವಸ್ಥೆ ಮಾಡಲಾಗುತ್ತದೆ
-ಎಚ್. ಪ್ರಭಾಕರ್‌ಗೌಡ, ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT